ಬಂಟ್ವಾಳ: ಮಿನಿ ವಿಧಾನಸೌಧದ ಸರ್ವೇ ಇಲಾಖೆ ಕಚೇರಿಯಲ್ಲಿ ಜಮೀನಿನ ಗಡಿ ಗುರುತಿಗಾಗಿ ಮಹಿಳೆಯರೊಬ್ಬರಿಂದ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸಿಬಿ ಪೊಲೀಸರು ಸರ್ವೆಯರ್ ಸುರೇಶ ಎಂಬಾತನನ್ನು ಶುಕ್ರವಾರ ಬಂಧಿಸಿದ್ದಾರೆ.
ಈತನು ಕಳ್ಳಿಗೆ ನಿವಾಸಿ ಪ್ರೀಮಾ ಸರಿತಾ ಪಿಂಟೋ ಎಂಬ ಮಹಿಳೆಯಿಂದ ರೂ.6 ಸಾವಿರ ಮೊತ್ತದ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆದಿದೆ.
ಈಗಾಗಲೇ ರೂ 8 ಸಾವಿರ ಮೊತ್ತ ಮುಂಗಡ ಪಾವತಿಸಿದ್ದ ಸರ್ವೆಯರ್ ಮತ್ತೆ ರೂ 7
ಸಾವಿರ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿದ್ದನು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ಎಸಿಬಿ ಪಶ್ಚಿಮ ವಲಯ ಎಸಿಬಿ ಎಸ್‌ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ.ಸಿ.ಪ್ರಕಾಶ್ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗುರುರಾಜ್, ಶ್ಯಾಮ್‌ಸುಂದರ್ ಮತ್ತಿತರರು ದಾಳಿ ನಡೆಸಿದ್ದರು.














