ಬಂಟ್ವಾಳ :ಬಿ ಸಿ ರೋಡ್ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಬಂಟ್ವಾಳ ಇದರ ಆಶ್ರಯದಲ್ಲಿ ಮರಿಯಲದ ನೆಂಪು- ಹಿರಿಯರ ಸಮ್ಮಿಲನ ಕಾರ್ಯಕ್ರಮವನ್ನು ಚಿತ್ರ ದುರ್ಗ ಕುಂಬಾರ ಗುಂಡಯ್ಯ ಸಂಸ್ಥಾನ ಕುಂಬಾರ ಗುರುಪೀಠದ ಪೂಜ್ಯಶ್ರೀ ಶ್ರೀ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು,ದೇವ ದೇವತೆಗಳ ಜತೆಯಲ್ಲಿ ತನ್ನ ಅಳಿಲ ಸೇವೆಗೈಯುತ್ತಾ ಎಲ್ಲಾ ಪುರಾಣ ಕಾಲದಲ್ಲೂ ಪ್ರಾಮಾಣಿಕವಾಗಿ ದುಡಿದವರು ಕುಲಾಲ ಸಮುದಾಯದ ಜನರು ಹಾಗೂ ಯುಗ ಯುಗದಲ್ಲೂ ಕುಲಾಲ ಸಮುದಾಯದ ಜನರು ಶ್ರೇಷ್ಠತೆಯನ್ನು ಪಡೆದವರು ಸಂಘಟಿತರಾದಾಗ ಮಾತ್ರ ನಮ್ಮ ಅಭ್ಯದ್ಯಯ ಸಾಧ್ಯ ಎಂದು ಆಶೀರ್ವಚನ ನೀಡಿದರು.
ಪುರ್ವಾನ್ಹ ಮಹಾಸಭೆಯನ್ನು ದಯಾನಂದ ಬಂಟ್ವಾಳ ಉದ್ಘಾಟಿಸಿ ಶುಭ ಹಾರೈಸಿದರು. ಚುನಾವಣಾ ಅಧಿಕಾರಿಯಾಗಿ ಮಹಾಬಲ ಮಾಸ್ಟರ್ ಸಹಕರಿಸಿದರು. ಗತ ವರ್ಷಗಳ ವರದಿ ಮತ್ತು ಲೆಕ್ಕಪತ್ರವನ್ನು ಕಾರ್ತಿಕ್ ಮಯ್ಯರಬೈಲು ಸಭೆಯ ಮುಂದಿಟ್ಟರು.
ನಂತರ ನಡೆದ ಹಿರಿಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಹಿರಿಯರಿಗೆ ಆರೋಗ್ಯ ಮಾಹಿತಿಯನ್ನು ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾದಿಕಾರಿ ಡಾ! ಅಂಕಿತಾ ಪ್ರೇಮ್ ನೀಡಿದರು. ಹಿರಿಯ ನ್ಯಾಯವಾದಿ ರಾಮ್ ಪ್ರಸಾದ್ ಕುಟುಂಬದಲ್ಲಿ ಹಿರಿಯರ ಪಾತ್ರದ ಬಗ್ಗೆ ಅರಿವು ಮಾಹಿತಿ ನೀಡಿದರು.ಭಾರತಿ ಶೇಷಪ್ಪ ಹಿರಿಯರಿಗೆ ತೆಲಿಕೆ ನಲಿಕೆ ಎಂಬ ವಿಭಿನ್ನ ಕಾರ್ಯಕ್ರಮ ನೀಡಿ ಹಿರಿಯರನನ್ನು ರಂಜಿಸಿದರು.
ಸ್ವಜಾತಿ ಭಾಂದವರು ಮನೆಯಲ್ಲಿ ತಯಾರಿಸಿ ತಂದ 80 ಕ್ಕೂ ಹೆಚ್ಚು ಬಗೆಯ ಮಳೆಗಾಲದ ಊಟ ತಿನಿಸುಗಳು ಗಮನ ಸೆಳೆಯಿತು. ಮಕ್ಕಳ,ಮಹಿಳೆಯರ ಮತ್ತು ಪುರುಷರ ಒಳಾಂಗಣ ಹೊರಾಂಗಣ ಸ್ಪರ್ಧೆಗಳು ನಡೆದು
ಅಪರಾಹ್ನ ನಡೆದ ಸಭಾಕಾರ್ಯಕ್ರಮವನ್ನು ದೇವಂದಬೆಟ್ಟು ಕನಪಾಡಿತ್ತಾಯಿ ದೈವಸ್ಥಾನದ ದೈವ ಮಾನಿ ಸದಾಶಿವ ಮೂಲ್ಯ ಯಾನೆ ಧೂಮ ಮೂಲ್ಯ
ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಯುವ ವೇದಿಕೆಯ ಬಂಟ್ವಾಳ ಅಧ್ಯಕ್ಷರಾದ ಸಂತೋಷ್ ಮರ್ತಾಜೆ ವಹಿಸಿದ್ದರು.
ಸೇವೆಯಲ್ಲಿ ಇಳಿ ವಯಸಿನಲ್ಲೂ ಸಾಧನೆಗೈಯುವ ಶ್ರೀ ನಾರಾಯಣ ಮೂಲ್ಯ ಇಜ್ಜದೊಟ್ಟು ಕಾವಳಕಟ್ಟೆ ಇವರನ್ನು ಕುಲಾಲ ಭೀಷ್ಮ ಬಿರುದಿನೊಂದಿಗೆ ಸನ್ಮಾನಿಸಲಾಯಿತು.
ಅತಿಥಿಗಳಾಗಿ ಮಡಿಕೇರಿ ಕೊಡಗು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷರು ಗ್ರಾಹಕರ ವೇದಿಕೆ ನ್ಯಾಯಾಲಯದ ನ್ಯಾಯಾದೀಶೆ ರೇಣುಕಾಂಬ. ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಹಿಂದಳಿದ ವರ್ಗಗಳ ಆಯೋಗದ ಅಧ್ಯಕ್ಷ ಸುಪ್ರಿಂ ಮಂಜು ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆಯ ಅಧ್ಯಕ್ಷ ಗಂಗಾಧರ ಬಂಜನ್, ಕು. ಕುಂ. ಮಹಿಳಾ ಆಧ್ಯಕ್ಷೆ ಬಬಿತಾ ರವೀಂದ್ರ ಬೊಲ್ಪುಗುಡ್ಡೆ, ಮಂಗಳೂರು ದಾಸ್ ಪ್ರಮೋಶನ್ನ ಲ! ಅನಿಲ್ ದಾಸ್ , ಪುಟ್ಟಣ್ಣ ಕುಲಾಲ್ ಪ್ರತಿಷ್ಟಾನದ ಕಾರ್ಯದರ್ಶಿ ಮಮತಾ ಅಣ್ಣಯ್ಯ ಕುಲಾಲ್ ಜಿಲ್ಲಾ ಕು.ಕುಂ. ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ . ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಬಂಟ್ವಾಳದ ಗೌರವಾಧ್ಯಕ್ಷರಾದ ಟಿ.ಶೇಷಪ್ಪ ಮಾಸ್ಟರ್ ಕರ್ನಾಟಕ ರಾಜ್ಯ ಕುಂಬಾರ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಟೀಚರ್ ಗೌರವಾಧ್ಯಕ್ಷ ಮಾಧವ ಕುಲಾಲ್,ರವರ ಉಪಸ್ಥಿತಿ ಯಲ್ಲಿ ನಿತೀಶ್ ಕುಲಾಲ್ ಪಲ್ಲಿಕಂಡ ಸ್ವಾಗತಿಸಿ, ಕಿಶೋರ್ ಮೊಡಂಕಾಪು ವಂದಿಸಿದರು. ಎಚ್ಕೆ ನಯನಾಡು ನಿರೂಪಿಸಿದರು.















