ಬಂಟ್ವಾಳ: ಪಿ ಯು ಸಿ ವಿದ್ಯಾರ್ಥಿಯೋರ್ವ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 7 ರಂದು ಸಂಜೆ ವೇಳೆ ತಾಲೂಕಿನ ತುಂಬೆ ಗ್ರಾಮದ ಪರ್ಲಕ್ಕೆ ಎಂಬಲ್ಲಿ ನಡೆದಿದೆ.
ಪರ್ಲಕ್ಕೆ ನಿವಾಸಿ ಕರುಣಾಕರ ಗಟ್ಟಿ ಅವರ ಏಕೈಕ ಪುತ್ರ ತೇಜಸ್ ಆತ್ಮಹತ್ಯೆ ಮಾಡಿಕೊಂಡ ಬಾಲಕನಾಗಿದ್ದಾನೆ. ತೇಜಸ್(17) ಬಿ ಸಿ ರೋಡ್ ನ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ತಂದೆ ತಾಯಿ ಕೆಲಸಕ್ಕೆ ಹೋಗುತ್ತಿದ್ದು ಯಾವಾಗಲೂ ಸಂಜೆ ಇವರು ಬರುವಾಗ ಮಗ ಮನೆಯಲ್ಲಿ ಇರುತಿದ್ದ.
ಜು 7ರಂದು ಸಂಜೆ ತಂದೆ ಮನೆಗೆ ಬಂದಾಗ ಬಾಗಿಲು ಹಾಕಿದ್ದು,ಕಂಡು ಮನೆಯೊಳಗೆ ನೋಡಿದಾಗ ಕೋಣೆಯಲ್ಲಿ ಈತ ನೇಣು ಬಿಗಿದು ನೇತಾಡುವುದು ಕಂಡು ಬಂದಿದೆ.ತತ್ ಕ್ಷಣ ಆಸ್ಪತ್ರೆಗೆ ತರಲಾಗಿದೆಯಾದರೂ ಆತ ಮೃತಪಟ್ಟಿರುವುದಾಗಿ ವೈದ್ಯರು ಪರೀಕ್ಷಿಸಿ ತಿಳಿಸಿದ್ದಾರೆ. ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ, ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.













