ಬಂಟ್ವಾಳ:ಇಲ್ಲಿನ ಮಾಣಿ ಸಮೀಪದ ಸೂರಿಕುಮೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿಯಾಗಿ ತೂಫಾನು ಚಾಲಕ ಸುರೇಂದ್ರ ಸೇರಾ ಎಂಬವರ ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಸಂಜೆ ನಡೆದಿದೆ.
ಸ್ಥಳೀಯ ಗೇರು ಬೀಜ ಕಂಪೆನಿ ನೌಕರರನ್ನು ಗುರುವಾರ ಸಂಜೆ ಮನೆಗೆ ಬಿಟ್ಟು ವಾಪಾಸು ಬರುತ್ತಿದ್ದ ವೇಳೆ ಲಾರಿ ಡಿಕ್ಕಿಯಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ
ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆಯುದ್ದಕ್ಕೂ ಮಳೆ ನಿರು ತುಂಬಿಕೊಂಡಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿರುವುದಾಗಿ ಎಸೈ ಮಾರುತಿ ತಿಳಿಸಿದ್ದಾರೆ.

















