Coastal Bulletin

ಬಂಟ್ವಾಳ :ಇಲ್ಲಿನ ಕಾವಳಪಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಬೆಟ್ಟು-ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನ ಸಂಪಕಿ೯ಸುವ ಮಣ್ಣಿನ ರಸ್ತೆ ಪ್ರಥಮ ಮಳೆಗೆ ಸಂಪೂಣ೯ ಹದಗೆಟ್ಟು ಕೆಸರುಗದ್ದೆಯಾಗಿ ಪರಿವತ೯ನೆಗೊಂಡಿದೆ.

ಈಗಾಗಲೇ ಕಿರಿದಾಗಿರುವ ಈ ರಸ್ತೆಯು ಬೇ‌ಸಿಗೆಯಲ್ಲಿ ಧೂಳು ತುಂಬಿಕೊಂಡರೆ ಮಳೆಗಾಲದಲ್ಲಿ ಕೆಸರುಮಯಗೊಂಡು ಪಾದಚಾರಿಗಳಿಗೆ ನಡೆದಾಡಲು ಕೂಡಾ ಅಸಾಧ್ಯವಾಗಿದೆ. ಈ ಹಿಂದೆ ಪರಶುರಾಮ ಋಷಿ ತಪಸ್ಸು ಮಾಡಿದ್ದರು ಎಂಬ ಹಿನ್ನೆಲೆ ಹೊಂದಿರುವ ಪ್ರಕ್ರತಿ ರಮಣೀಯ ಸ್ಥಳದಲ್ಲಿ ಕಾರಣಿಕ ಪ್ರಸಿದ್ಧ ಗಾಯತ್ರಿ ದೇವಿ ದೇವಸ್ಥಾನ ಇದೆ. ವಗ್ಗ ರಾಷ್ಟ್ರೀಯ ಹೆದ್ದಾರಿ ಬಳಿ ಕಾವಳಕಟ್ಟೆ_ ವಾಮದಪದವು

ರಸ್ತೆ ನಡುವೆ ಪಿಲಿಂಗಾಲು ದೇವಸ್ಥಾನ ರಸ್ತೆ ಹಾದು ಹೋಗಿದೆ.

 ಮಂದಿನ ವಷ೯ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಈ ದೇವಳಕ್ಕೆ ಬರಲು ಅನುಕೂಲವಾಗುವಂತೆ ರಸ್ತೆ ವಿಸ್ತರಿಸಿ ಕಾಂಕ್ರಿಟೀಕರಣಗೊಳಿಸಬೇಕು

ಎಂದು ಇಲ್ಲಿನ ಭಕ್ತರು ಆಗ್ರಹಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಹಿತ ಶಾಸಕರು ಮತ್ತು ಸಂಸದರಿಗೆ ಮನವಿ ಸಲ್ಲಿಸಲಾಗಿದೆ ಎಂದು ದೇವಳದ ಧಮ೯ದಶಿ೯ ಕೆ.ಎಸ್.ಪಂಡಿತ್ ತಿಳಿಸಿದ್ದಾರೆ.

Leave a Comment