ಬಂಟ್ವಾಳ : ರೋಟರಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ರೋ ಪ್ರಕಾಶ್ ಕಾರಂತ್, ಉಪ ಗವರ್ನರ್ ರೋ ಮಂಜುನಾಥ್ ಆಚಾರ್ಯ ರೋಟರಿ ಕ್ಲಬ್ ಬಂಟ್ವಾಳ ಟೌನ್ ಗೆ ಬೇಟಿ ನೀಡಿ ಕ್ಲಬ್ ಅಸೆಂಬ್ಲಿ ನಡೆಸಿದರು,
ಅಧ್ಯಕ್ಷರಾದ ರೋ ಚಿತ್ತಾರಂಜನ್ ಶೆಟ್ಟಿ ಬೊಂಡಾಲ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಸಜೀಪ ನಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ನೀರಿನ ಪೂರ್ ಫೈರ್ ಉದ್ಘಾಟಿಸಿ ಹಸ್ತಾಂತರಿಸಿದರು, ಕೊಯಿಲದಲ್ಲಿ ಅನಾರೋಗ್ಯಪೀಡಿತರಿಗೆ ಕ್ಲಬ್ ವತಿಯಿಂದ 5000 ನಗದು ನೀಡಲಾಯಿತು, ಸಾಲೆತ್ತೂರು ಕೊಳ್ನಡು ಪರಿಶಿಷ್ಟ ಪಂಗಡದ ಬಡ ಕುಟುಂಬದ ಹರೀಶ ಕುಟುಂಬಕ್ಕೆ ಒಂದು ಮನೆ ನಿರ್ಮಾಣ ಮಾಡಿ ಅಲ್ಲಿ ದೀಪ ಬೆಳಗಿಸಿ ಮನೆಯ ಕೀ ಯನ್ನು ಕುಟುಂಬಕ್ಕೆ ಹಸ್ತಾಂತರಿಸಿ ಶುಭ ಕೋರಿದರು,
ಸಂಜೆ ಬಂಟ್ವಾಳ ಬೈಪಾಸ್ ಭಂಡಾರಿ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗವರ್ನರ್, ರೋ ಪ್ರಕಾಶ್ ಕಾರಂತ್, ಪ್ರಥಮ ಮಹಿಳೆ ರೋ ವಾಣಿ ಕಾರಂತ್, ಉಪ ಗವರ್ನರ್, ರೋ ಮಂಜುನಾಥ್ ಆಚಾರ್ಯ,ರೋ ಚಿತ್ತಾರಂಜನ್ ಶೆಟ್ಟಿ ಬೊಂಡಾಲ, ರೋ ಪುಷ್ಪ ರಾಜ್ ಹೆಗ್ಡೆ, ರೋ ರಮೇಶ್ ತುಂಬೆ, ಕಾರ್ಯದರ್ಶಿ ರೋ ನಾರಾಯಣ ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು.
ಅಂಗವಿಕಲ ಫಲಾನುಭವಿಗಳಿಗೆ ಎರಡು ಗಾಲಿ ಕುರ್ಚಿಗಳನ್ನು
ನೀಡಲಾಯಿತು, ನಾಲ್ಕು ಜನ ಬಡ ಮಹಿಳೆಯರಿಗೆ ಟೈಲರಿಂಗ್ ಮಷೀನ್ ಗಳನ್ನು ನೀಡಲಾಯಿತು, ಎರಡು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್ಶಿಪ್ ನೀಡಲಾಯಿತು ,ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವಾನರ್ಥಕ ವೆಂಕಪ್ಪ ನಲಿಕೆಯವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ವಾಚಿಸಿ, ತನಿಷ್ಕ ಜಯರಾಜ್ ಪ್ರಾರ್ಥಿಸಿದರು. ಗವರ್ನರ್ ಕ್ಲಬ್ಬಿನ ಅಧ್ಯಕ್ಷರು ಮತ್ತು ಸದಸ್ಯರ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು, ಉಪ ಗವರ್ನರ್ ಕ್ಲಬ್ಬಿನ ಕಾರ್ಯಕ್ರಮಗಳ ಬಗ್ಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು,
ಈ ಕಾರ್ಯಕ್ರಮದಲ್ಲಿ ಐಪಿಪಿ ರೋ ಶನ್ಪಥ್ ಶರೀಫ್, ರೋ ಜಯರಾಜ್ ಯಸ್ ಬಂಗೇರ, ನಿಯೋಜಿತ ಅಧ್ಯಕ್ಷ ರೋ ಸುರೇಶ್ ಸಾಲಿಯನ್ ರೋ ಕಿಶೋರ್ ಕುಮಾರ್ ,ಖಜಾಂಚಿ ರೋ ವಚನ್ ಶೆಟ್ಟಿ ಸಾರ್ಜೆಂಟ್ ಆರ್ಮ್ಸ್ ರೋ ಮನೋಜ್ ಕನಪಾಡಿ ,. ರೋ ಸವಿತಾ ಚಿತ್ತರಂಜನ್ ಶೆಟ್ಟಿ , ರೋ ಗಾಯತ್ರಿ ಲೋಕೇಶ್,ರೋ ರಶ್ಮಿ ವಚನ್, ಇದ್ದರು ನರೇಂದ್ರನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.















