ಮಂಗಳೂರು: ಕುಲಾಲ ಸಮುದಾಯದ ಆಡಳಿತಕ್ಕೊಳಪಟ್ಟಿರುವ ಇಲ್ಲಿಯ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಈಗಾಗಲೇ ಪೂರ್ಣಗೊಂಡು ಮೇ ೧೪ರಿಂದ ೨೪ರವರೆಗೆ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಜರಗಲಿದೆ.
ಈ ಹಿನ್ನೆಲೆಯಲ್ಲಿ ಮೇ ೫ರಂದು ಕ್ಷೇತ್ರದಲ್ಲಿ ಆಡಳಿತ ಕಚೇರಿ ಹಾಗೂ ಸೇವಾ ಕಚೇರಿಯ ಉದ್ಘಾಟನೆಯು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್ ಮತ್ತು ಶ್ರಾವಂತಿ ಪ್ರೇಮಾನಂದ ಕುಲಾಲ್ ದಂಪತಿಯ ಉಪಸ್ಥಿತಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆಯೊಂದಿಗೆ ಜರಗಿತು.
ಈ ಸಂದರ್ಭದಲ್ಲಿ ವಿವಿಧ ಸಮಿತಿ ಪ್ರಮುಖರಾದ ದಾಮೋದರ ಎ. ಕುಲಾಲ್, ಸುರೇಶ್ ಕುಲಾಲ್ ಮಂಗಳ
ದೇವಿ, ಗಿರಿಧರ್ ಮೂಲ್ಯ, ದಿನೇಶ್ ಕುಲಾಲ್ ಮುಂಬೈ ದೂಮಪ್ಪ ಮೂಲ್ಯ ಮಂದರಬೈಲು, ಮೋಹನದಾಸ ಅಳಪೆ, ನಾಗೇಶ್ ಮೇರಿಹಿಲ್, ಪ್ರಫುಲ್ಲಾ ನಾಗೇಶ್, ಸುಜಾತ ಉದಯ ಕುಮಾರ್, ಪಾರ್ವತಿ, ನಾಗವೇಣಿ, ಸದಾಶಿವ ಬಿಜೈ, ವಿಶ್ವನಾಥ ಕೈಕಂಬ, ದಯಾನಂದ ಪಿ.ಎಸ್., ಚಂದಪ್ಪ ಮೂಲ್ಯ, ರತ್ನ ಬಿ.ಸಿ. ಮೂಲ್ಯ, ಗೋಪಾಲ ಸಾಲ್ಯಾನ್ ಪಡೀಲ್, ಮಾದವ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.















