ಬಿ ಸಿ ರೋಡ್ :ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ -- 68ನೇ ಮಹಾಪರಿನಿರ್ವಾಹನ ದಿನ ಸ್ಮರಣೆ.

Coastal Bulletin
ಬಿ ಸಿ ರೋಡ್ :ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ -- 68ನೇ ಮಹಾಪರಿನಿರ್ವಾಹನ ದಿನ ಸ್ಮರಣೆ.

ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ದಲಿತ ನಾಗರೀಕ ಹಿತರಕ್ಷಣಾ ಯುವ ವೇದಿಕೆ ಬಂಟ್ವಾಳ ಇದರ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ ಶೋಷಿತ ವರ್ಗದವರ ಪ್ರಾತ ಸ್ಮರಣೀಯ ಸೂರ್ಯ ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ -- 68ನೇ ಮಹಾಪರಿನಿರ್ವಾಹನ ದಿನ ಸ್ಮರಣೆ ಕಾರ್ಯಕ್ರಮವು ಡಿ 06ನೇ ಶುಕ್ರವಾರ ಬೆಳಗ್ಗೆ ಗಂಟೆ:10ಕ್ಕೆ.ಸರಿಯಾಗಿ ಬಿ.ಸಿ.ರೋಡಿನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಜನಾರ್ಧನ ಬೋಳಂತೂರು ಮಾನ್ಯ ಗೌರವಾಧ್ಯಕ್ಷರು ಬಂಟ್ವಾಳ ತಾಲೂಕು ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ (ರಿ.) ಜೋಡುಮಾರ್ಗ. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಹೊನ್ನಪ್ಪ ಕುಂದರ್, ಮಾನ್ಯ ಅಂಬೇಡ್ಕರ್ ಚಿಂತಕರು ನೆರವೇರಿಸಿದರು.

ಸಭಾಧ್ಯಕ್ಷರಾಗಿ ಕೆ. ಸತೀಶ್ ಅರಳ, ಮಾನ್ಯ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ದಲಿತ ನಾಗರೀಕ ಹಿತರಕ್ಷಣಾ ಯುವ ವೇದಿಕೆ ಬಂಟ್ವಾಳ ಇವರು ವಹಿಸಿಕೊಂಡರು. ಗೌರವ ಉಪಸ್ಥಿತರಾಗಿ ಶಾರದಾ ರತ್ನಕರ್ ನಾಯ್ಕ

ಮಾನ್ಯ ಅಧ್ಯಕ್ಷರು ಪೀಲತಬೆಟ್ಟುಗ್ರಾಮ ಪಂಚಾಯತ್. ಧರ್ಣಪ್ಪ ಬಡಗಬೆಳ್ಳೂರು ಮಾನ್ಯ ಗೌರವಾಧ್ಯಕ್ಷರು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ಘಟಕ. ಸತೀಶ್ ಕಕ್ಕೆಪದವು, ಮಾನ್ಯ ತುಳು ಸಾಹಿತಿಗಳು ಮತ್ತು ಅಂಬೇಡ್ಕರ್ ಚಿಂತಕರು, ಈ ಕಾರ್ಯಕ್ರಮದಲ್ಲಿ ವೇದಿಕೆಯ ಗೌರವಾನ್ವಿತ ಗಣ್ಯರು ಮತ್ತು ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಅಂಬೇಡ್ಕರ್ ರವರಿಗೆ ಜೈ ಭೀಮ್ ನಮನಗಳನ್ನು ಸಲ್ಲಿಸಲಾಯಿತು. 

ಪ್ರೀತಿರಾಜ್ ದ್ರಾವಿಡ್ ಸ್ವಾಗತಿಸಿದರು. ಅಭಿಲಾಷ್ ಕೃಷ್ಣಾಪುರ ಧನ್ಯವಾದ ಅರ್ಪಿಸಿದರು.

Leave a Comment