ನರಿಕೊಂಬು: ಡಿ.17-24, "ವಿವೇಕ ಕಿರಣ" ಮಂದಿರದ15ನೇ ವರ್ಧಂತ್ಯುತ್ಸವ ಕಾರ್ಯಕ್ರಮ. ಹರಿವಂಶ ಪುರಾಣ ಪ್ರವಚನ ಸಪ್ತಾಹ, ಧಾರ್ಮಿಕ ಸಭೆ, ಸಾಂಸ್ಕೃತಿಕ ವೈಭವ.

Coastal Bulletin
ನರಿಕೊಂಬು: ಡಿ.17-24, "ವಿವೇಕ ಕಿರಣ" ಮಂದಿರದ15ನೇ ವರ್ಧಂತ್ಯುತ್ಸವ ಕಾರ್ಯಕ್ರಮ. ಹರಿವಂಶ ಪುರಾಣ ಪ್ರವಚನ ಸಪ್ತಾಹ, ಧಾರ್ಮಿಕ ಸಭೆ, ಸಾಂಸ್ಕೃತಿಕ ವೈಭವ.

ಬಂಟ್ವಾಳ :ವಿವೇಕ ಜಾಗ್ರತ ಬಳಗ ಬಂಟ್ವಾಳ ಇಲ್ಲಿನ ನರಿಕೊಂಬು ಶ್ರೀ ಗುರೂಜೀ ಸ್ವಾಮಿ ವಿವೇಕಾನಂದರ ದಿವ್ಯ ಸಾನ್ನಿಧ್ಯವಾದ "ವಿವೇಕ ಕಿರಣ" ಮಂದಿರದ 15ನೇ ವರ್ಧಂತ್ಯುತ್ಸವ ಹಾಗೂ ಹರಿವಂಶ ಪುರಾಣ ಪ್ರವಚನ ಸಪ್ತಾಹವು ಡಿ.17ರಿಂದ 24ರ ವರೆಗೆ ನರಿಕೊಂಬು ವಿವೇಕ ಕಿರಣ' ಮಂದಿರದಲ್ಲಿ ನಡೆಯಲಿದೆ.

ಡಿ.24ರಂದು ಸಂಜೆ ವರ್ಧಂತ್ಯುತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಡಾ. ವಿವೇಕ ಉಡುಪ (ಯೋಗಿಜೀ)  ಬಿ ಎನ್ ವೈ ಎಸ್, ಎಂ ಡಿ, ಟ್ರಸ್ಟಿ ಡಿವೈನ್ ಪಾರ್ಕ್ ಟ್ರಸ್ಟ್ ರಿ ಸಾಲಿಗ್ರಾಮ ಇವರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಪೂಜ್ಯ ಶ್ರೀ ವಿಜಯ ಮಾದುಕೋಡಿ ಸಾಯಿ ಹಿಲಿಂಗ್ ಸೆಂಟರ್, ಸ್ವಾಮಿ ಕೊರಗಜ್ಜ ದೈವ ಸಾನಿಧ್ಯ ಮಾದುಕೋಡಿ ನೆರವೇರಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ವೇದಮೂರ್ತಿ ವಿದ್ವಾನ್ ಶ್ರೀ ಶ್ರೀನಿವಾಸ ಭಟ್ ಕುತ್ಪಾಡಿ, ಪ್ರಖ್ಯಾತ ಪ್ರವಚನಗಾದರು ಮತ್ತು ಜ್ಯೋತಿಷಿಗಳು

ಉಡುಪಿ ಆಗಮಿಸಲಿದ್ದಾರೆ.

ಡಿ.17ರಿಂದ 23ರ ತನಕ ಪ್ರತಿದಿನ ಸಂಜೆ 5ರಿಂದ 7.30ರ ವರೆಗೆ ವಿದ್ವಾನ್ ಶ್ರೀ ಶ್ರೀನಿವಾಸ ಭಟ್ ಕುತ್ಪಾಡಿ ಯವರಿಂದ ಹರಿವಂಶ ಪುರಾಣ ಪ್ರವಚನ ಸಪ್ತಾಹ ನಡೆಯಲಿದ್ದು ಈ ಪ್ರವಚನ ಸಪ್ತಾಹದ ಉದ್ಘಾಟನೆಯನ್ನು  ವೇದಮೂರ್ತಿ ವಿದ್ವಾನ್ ಶಶಾಂಕ್ ಭಟ್ ನಾಲ್ಕೂರು ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಮನೋಜ್ ಕಟ್ಟೆಮಾರ್ ಧರ್ಮದರ್ಶಿಗಳು, ಮಂತ್ರಾದೇವತಾ ಸಾನಿಧ್ಯ ಕಟ್ಟೆಮಾರ್, ಇವರು ಆಗಮಿಸಲಿದ್ದಾರೆ.  ಪ್ರತಿ ದಿನ ಅನ್ನ ಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ವಿವೇಕ ಜಾಗ್ರತ ಬಳಗವು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment