ಬಂಟ್ವಾಳ :ರಾಜ್ಯ ಸರ್ಕಾರದ ಪಾಲು ಬಂಡವಾಳ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು ಇದರ "ಮುಂಗಾರು ಹಂಗಾಮ" ಎಂಬ ಮಳೆಗಾಲದ ಠೇವಣಿಗೆ ಹಾಗೂ ಚಿನ್ನಾಭರಣ ಸಾಲಕ್ಕೆ ಹೊಸ ಆಫರ್ ನೀಡಲಾಗಿದ್ದು, ಇದರ ಕರಪತ್ರ ಬಿಡುಗಡೆ ಕಾರ್ಯಕ್ರಮವು ಮೆಲ್ಕಾರ್ ಶಾಖೆಯಲ್ಲಿ ಜೂನ್ 4ರಂದು ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ಮೆಲ್ಕಾರ್ ನಿಶಾಂತ್ ಆಯಿಲ್ ಸೆಂಟರ್ ಮಾಲಕರಾದ ಎಂ ಎನ್ ಕುಮಾರ್ ದೀಪ ಪ್ರಜ್ವಲನೆ ಮಾಡಿ ಯೋಜನೆಯ ಬ್ಯಾನರ್ ಬಿಡುಗಡೆಗೊಳಿಸಿ ಸಂಘಕ್ಕೆ ಶುಭ ಹಾರೈಸಿದರು.
ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘದ ನಿರ್ದೇಶಕರಾದ ಪ್ರಶಾಂತ್ ಬಂಜನ್ ಕರಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಸಹಕಾರಿ ಸಂಘದ ಮೆಲ್ಕಾರ್ ಶಾಖೆಯ ಗ್ರಾಹಕರಾದ ಸಂದೇಶ್ ಜನಾರ್ದನ್ ಸಾಲಿನ್ ಮೇಲ್ವಿನ್ ಡಿ
ಕುನ್ಹ ಮತ್ತಿತರರು ಉಪಸ್ಥಿತರಿದ್ದರು.
ಶಾಖಾ ಸಿಬ್ಬಂದಿಗಳಾದ ಜ್ಯೋತಿ, ಚೇತನ್, ನಿತ್ಯ ನಿಧಿ ಸಂಗ್ರಾಹಕರಾದ ಪುಷ್ಪಾ ಸಹಕರಿಸಿದರು.
ಮಳೆಗಾಲದ ವಿಶೇಷ ಆಫರ್:
ಒಂದು ವರ್ಷದ ನಿರಖು ಠೇವಣಿಗೆ 10 ಶೇಕಡ ಬಡ್ಡಿ ಹಾಗೂ ಚಿನ್ನಾಭರಣ ಪ್ರತಿ ಗ್ರಾಂ ಗೆ 7777ರಷ್ಟು ಗರಿಷ್ಠ ಸಾಲ ಸೌಲಭ್ಯ,100 ಕ್ಕೆ ಕೇವಲ 85 ಪೈಸೆ ಕನಿಷ್ಠ ಬಡ್ಡಿ ಮಾತ್ರ. ಇದು ಗರಿಷ್ಠ ಸಾಲ -ಕನಿಷ್ಠ ಬಡ್ಡಿ ದರದ ಆಫರ್ ಆಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.














