ಬಜ್ಪೆ: ಸಮಾಜ ಸೇವಾ ಸಹಕಾರಿ ಸಂಘದ ಅಮೂಲ್ಯ ಸ್ವಸಹಾಯ ಸಂಘಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮ.

Coastal Bulletin
ಬಜ್ಪೆ: ಸಮಾಜ ಸೇವಾ ಸಹಕಾರಿ ಸಂಘದ ಅಮೂಲ್ಯ ಸ್ವಸಹಾಯ ಸಂಘಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮ.

ಬಜ್ಪೆ :ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಬಜ್ಪೆ ಶಾಖೆಯ ಅಮೂಲ್ಯ ಸ್ವಸಹಾಯ ಸಂಘಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮವು ಜೂ 06ರಂದು ಬಜಪೆ ಶಾಖೆಯ ಬಳಿ ಇರುವ ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಿತು.


ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ್ ವಹಿಸಿದ್ದರು. ಸಂಘದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮೋಹನ್ ಎಂ ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಹಕಾರಿಯ ಬೆಳವಣಿಗೆಯಲ್ಲಿ ಸ್ವಸಹಾಯ ಸಂಘಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

 ಸಭೆಯಲ್ಲಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ ಅರುಣ್ ಕುಮಾರ್

ಕೆ, ನಿರ್ದೇಶಕರಾದ ಸತೀಶ್ ಪಲ್ಲಮಜಲು, ರಮೇಶ್ ಬಿ ಸಾಲ್ಯನ್, ಕಿರಣ್ ಅಟ್ಲೂರು ಮತ್ತು ಸಹಕಾರಿಯ ಮಾರಾಟಧಿಕಾರಿ ಉದಯ್ ಕುಮಾರ್ ಹಾಜರಿದ್ದರು.

 ಶಾಖ ವ್ಯವಸ್ಥಾಪಕಿ ನಯನ ಪ್ರಸ್ತಾಪಿಸಿ, ಕಿರಿಯ ಸಹಾಯಕ ಸನತ್ ಕುಮಾರ್ ಸ್ವಾಗತಿಸಿ, ಸ್ವ ಸಹಾಯ ಸಂಘಗಳ ಮೇಲ್ವಿಚಾರಕರುಗಳಾದ ದುರ್ಗಾ ಪ್ರಸಾದ್ ಪಿ.ಕೆ. ವಂದಿಸಿ, ಶಿವರಾಂ ಕಾರ್ಯಕ್ರಮ ನಿರೂಪಿಸಿದರು.

Leave a Comment