breaking news

Coastal Bulletin

ಮಂಗಳೂರು: ಇತಿಹಾಸ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಕುಲಶೇಖರ ಶ್ರೀ ವೀರ ನಾರಾಯಣ ಕ್ಷೇತ್ರವು ಒಂದಾಗಿದೆ. ಹಿರಿಯರ ನಂಬಿಕೆಯ ಆಧಾರದಲ್ಲಿ ಆರಾಧನೆ ಮಾಡಿಕೊಂಡು ಬಂದಿರುವ ಶ್ರೀ ವೀರನಾರಾಯಣ ದೇವರು ನಂಬಿದವರಿಗೆ ಶಕ್ತಿ ತುಂಬುತ್ತಾನೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.

ಇತ್ತೀಚೆಗೆ ಜೀರ್ಣೋದ್ದಾರಗೊಂಡು ವೈಭಯುತವಾಗಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡ ಮಂಗಳೂರಿನ ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

   ಅಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ಇಡೀ ಕುಲಾಲ ಸಮುದಾಯದ ಬಂಧುಗಳು ಸೇರಿಕೊಂಡು ಅಭೂತಪೂರ್ವವಾಗಿ ಅಭಿವೃದ್ಧಿ ಪಡಿಸಿರುವುದು ಅಭಿನಂದನೀಯವಾಗಿದೆ ಎಂದ ಸಂಸದರು ಜಿಲ್ಲೆಗೆ ಮಾದರಿ ಕ್ಷೇತ್ರವಾಗಿ ಮೂಡಿಬಂದಿದ್ದು, ಪ್ರವಾಸೋದ್ಯಮ ಕೇಂದ್ರವಾಗಿಯು ಈ ಕ್ಷೇತ್ರ ಬೆಳಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಸಂಸದರೊಂದಿಗೆ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಬಿಜೆಪಿ

ಪ್ರಮುಖರಾದ ವಿಜಯಕುಮಾರ್, ಕಸ್ತೂರಿ ಪಂಜ, ಗಣೇಶ್ ಕುಲಾಲ್ , ಮನಪಾ ಸದಸ್ಯ ಕಿಶೋರ್ ಕೊಟ್ಟಾರಿ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ದೇವಳದ ಆಡಳಿತ ಸಮಿತಿ ಪದಾಧಿಕಾರಿಗಳಾದ ಪುರುಷೋತ್ತಮ ಕುಲಾಲ್, ಬಿ.ಪ್ರೇಮಾನಂದ ಕುಲಾಲ್, ಕೆ.ಸುಂದರ ಕುಲಾಲ್, ದಾಮೋದರ ಎ.ಬಂಗೇರ, ಎಂ.ಪಿ.ಬಂಗೇರ ಬಿಜೈ, ಗೀತಾ ಮನೋಜ್, ಗಿರಿಧರ ಜೆ.ಮೂಲ್ಯ, ಲಯನ್ ಅನಿಲ್ ದಾಸ್, ಕಿರಣ್ ಅಟ್ಲೂರು ಮೊದಲಾದವರಿದ್ದರು.

   ಈ ಸಂದರ್ಭ ದೇವಳದ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಗೌರವಿಸಲಾಯಿತು

Leave a Comment