ಫರಂಗಿಪೇಟೆ : ಸೆ. 7-9ವರೆಗೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಶ್ರಯದಲ್ಲಿ 42ನೇ ವರ್ಷದ ಶ್ರೀ ಗಣೇಶೋತ್ಸವ.

Coastal Bulletin
ಫರಂಗಿಪೇಟೆ : ಸೆ. 7-9ವರೆಗೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಶ್ರಯದಲ್ಲಿ 42ನೇ ವರ್ಷದ ಶ್ರೀ ಗಣೇಶೋತ್ಸವ.

ಬಂಟ್ವಾಳ: ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿಯ ವತಿಯಿಂದ 42ನೇ ವರ್ಷದ ಶ್ರೀ ಗಣೇಶೋತ್ಸವವು ಸೆ. 7-9ರ ವರೆಗೆ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಲಿದೆ.

ಸೆ. 7ರಂದು ಬೆಳಗ್ಗೆ ಶ್ರೀ ಮಹಾಗಣಪತಿ ಪ್ರತಿಷ್ಠೆ, ಹೊಸ್ತಾರೋಪಣೆ, ಗಣಯಾಗ, ಭಜನೆ, ಮಧ್ಯಾಹ್ನ ಮಹಾಪೂಜೆ, ತಾಳಮದ್ದಳೆ, ಸಂಜೆ ತುಳು ನಾಟಕ, ರಾತ್ರಿ ರಂಗಪೂಜೆ, ಭಜನೆ ನಡೆಯಲಿದೆ. ಸೆ. 8ರಂದು ಬೆಳಗ್ಗೆ

ಗಣಯಾಗ, ವಿವಿಧ ಸ್ಪರ್ಧೆ, ಮಹಾಪೂಜೆ, ಯಕ್ಷ-ಹಾಸ್ಯ ವೈಭವ, ಸಂಜೆ ಸಭಾ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸೆ. 9ರಂದು ಬೆಳಗ್ಗೆ ಗಣಯಾಗ, ಮಹಾಪೂಜೆ, ಸಂಜೆ ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿಯು ಪ್ರಕಟನೆ ತಿಳಿಸಿದೆ.

Leave a Comment