ಬಂಟ್ವಾಳ : ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘ ತುಂಬೆ ವತಿಯಿಂದ ಬೊಳ್ಳಾರಿ ದಿವಂಗತ ಸೋಮಪ್ಪ ಪೂಜಾರಿ ಗದ್ದೆಯಲ್ಲಿ '10ನೇ ವರ್ಸದ 'ಆಟಿಡೊಂಜಿ ಗಮ್ಮತ್ತು' ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಸೇವಾ ಜಾಗರಣ ವತಿಯಿಂದ ಭಾರತ ಮಾತಾ ಪೂಜಾನ ಕಾರ್ಯಕ್ರಮದೊಂದಿಗೆ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮಕ್ಕೆ ಆ 4ರಂದು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಅತೀ ಹೆಚ್ಚು ಅಂಕ ಪಡೆದ ಪರಿಸರದ ಸುತ್ತಮುತ್ತಲಿನ ಪ್ರತಿಭಾನ್ವಿತ ವಿದ್ಯಾರ್ಥಿನಿಗಳಾದ ಮೇಘ, ಭವಿಷ್ಯ, ನಿಧಿಶಾ ಹಾಗೂ ಬಹುಮುಖ ಪ್ರತಿಭೆ ಯೋಗೀಶ್ ಬಿ.ತುಂಬೆ, ಸುಶಾನ್ ಬೊಳ್ಳಾರಿ ಇವರನ್ನು ವಿಶೇಷ ಅಭಿನಂದನಾ ಕಾರ್ಯಕ್ರಮದ ಮೂಲಕ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಕಾರ ಭಾರತಿ ಬಂಟ್ವಾಳ ತಾಲೂಕು ಅಧ್ಯಕ್ಷ ಅನಿಲ್ ಪಂಡಿತ್ ವಳವೂರು, ರವೀಂದ್ರ ಕಂಬಳಿ ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರು, ಸಂತೋಷ್ ಕುಮಾರ್ ರೈ ಬೋಳಿಯಾರು ಮಾಜಿ ಮೈಸೂರು ಇಲೆಕ್ಟ್ರಿಕ್ ಅಧ್ಯಕ್ಷ, ಕೆ.ಜೆ ವಿಠಲ್ ಆಳ್ವ ಕಿರಣ್ ಕೇಟರರ್ಸ್ ಫರಂಗಿಪೇಟೆ, ಶೇಷಪ್ಪ ಮೂಲ್ಯ ಅಧ್ಯಕ್ಷರು ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿ, ಕೆ. ತಾರಾನಾಥ ಕೊಟ್ಟಾರಿ, ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷರು, ಜಗದೀಶ್ ಪೂಜಾರಿ ಕುಮ್ಡೇಲ್, ಜಯಲಕ್ಷ್ಮೀ ಭುವನೇಶ್ ಪಚ್ಚಿನಡ್ಕ, ಜಗದೀಶ್ ಹೊಳ್ಳರಬೈಲು ಹಿಂದೂ ಮುಖಂಡರು, ಶಿವಪ್ರಸಾದ್ ಬೊಳ್ಳಾರಿ ಭಜರಂಗದಳ ಮುಖಂಡ, ಗ್ರಾಮ ಪಂಚಾಯತ್ ಸದಸ್ಯರಾದ ಹೇಮಲತಾ ಜಿ ಪೂಜಾರಿ, ಅರುಣ್ ಕುಮಾರ್ ಗಾಣದಲಚ್ಚಿಲು, ಸೋಮಶೇಖರ ಪರ್ಲಕ್ಕೆ ಅಧ್ಯಕ್ಷರು ಭಾಗ್ಯೋದಯ ಸಂಘ ತುಂಬೆ ಸೇರಿದಂತೆ ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘ ತುಂಬೆ ಇದರ ಗೌರವಾಧ್ಯಕ್ಷ ಗಣೇಶ್ ಸುವರ್ಣ, ಗೌರವಾಧ್ಯಕ್ಷೆ ಪಾರ್ವತಿ ಐತ್ತಪ್ಪ ಕುಲಾಲ್, ಅಧ್ಯಕ್ಷರಾದ ಚೆನ್ನಕೇಶವ ಅಧ್ಯಕ್ಷೆ ಜಲಜಾಕ್ಷಿ ವಿಜಯ್ ಕೋಟ್ಯಾನ್, ಕಾರ್ಯದರ್ಶಿ
ಪ್ರವೇಶ್ ಕೋಟ್ಯಾನ್ ಮತ್ತು ಶೃತಿ ರಾಕೇಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಲ್ಲಿ ವಿಶೇಷ ಅತಿಥಿಗಳಾಗಿ ಬಹುಭಾಷಾ ನಟಿ ನಟಿ ಗಾನಾ ಭಟ್, ಖ್ಯಾತ ಹಾಸ್ಯ ನಟ ಸತೀಶ್ ಬಂದಲೆ, ಬಲೆ ತೆಲಿಪಾಲೆ ಖ್ಯಾತಿಯ ಸಂದೀಪ್ ಶೆಟ್ಟಿ ರಾಯಿ, ಬಿಡುಗಡೆಗೆ ಸಿದ್ಧವಾಗಿರುವ ಅನಾರ್ಕಲಿ ಚಿತ್ರ ತಂಡ ಕಲಾವಿದರು ಆಗಮಿಸಿದ್ದರು. ಕಾರ್ಯಕ್ರಮವನ್ನು ಯೊಗೀಶ್ ಬೊಳ್ಳಾರಿ ನಿರೂಪಿಸಿ, ಸುಶಾನ್ ಬೊಳ್ಳಾರಿ ಸ್ವಾಗತಿಸಿ, ಧನುಶಾ ಶೇಖರ್ ವಂದಿಸಿದರು.
ಬೆಳಿಗ್ಗೆ ಸಂಘದ ಪುಟಾಣಿಗಳು, ಸದಸ್ಯರು, ಸದಸ್ಯೆಯರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ಆಟಿ ಕಳೆಂಜ ಕೆಸರಿನ ಗದ್ದೆಯಲ್ಲಿ ನೃತ್ಯ ಮಾಡುತ್ತಾ ಬರುವ ದೃಶ್ಯ ಮನಮೋಹಕವಾಗಿತ್ತು. ಬಳಿಕ ಕೆಸರಿನಲ್ಲಿ ವಿಶೇಷ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು, ಪುರುಷರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮನದವರು ಈ ಆಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘದ 250ಕ್ಕೂ ಅಧಿಕ ಸದಸ್ಯರು ಆಟಿಡೊಂಜಿ ಗಮ್ಮತ್ 2024ರ ವಿನೂತನವಾದ ಟೀಶರ್ಟ್ ಧರಿಸಿ ಕೆಸರಿನ ಗದ್ದೆಯಲ್ಲಿ ಮಿಂಚಿದರು. ಸಂಘದ ಸುಮಾರು 40ಕ್ಕೂ ಹೆಚ್ಚು ಸದಸ್ಯರ ಮನೆಗಳಿಂದ ಬಗೆ ಬಗೆಯ ಆಟಿಯ ವಿಶೇಷ ಪದಾರ್ಥಗಳನ್ನು ತಾವೇ ತಯಾರಿಸಿ ಮಾಡಿ, ಬಂದಂತಹ ಜನರಿಗೆ ತಾವೇ ಬಡಿಸಿದ್ದು ವಿಶೇಷವಾಗಿತ್ತು.
ತುಂಬೆ :ಆಶೀರ್ವಾದ್ ಸೇವಾ ಸಂಘ ಮತ್ತು ಮಹಿಳಾ ಸಂಘದ ವತಿಯಿಂದ ಸಂಭ್ರಮದ "ಆಟಿಡೊಂಜಿ ಗಮ್ಮತ್ತ್" ಕಾರ್ಯಕ್ರಮ















