ಬಂಟ್ವಾಳ :ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ.

Coastal Bulletin
ಬಂಟ್ವಾಳ :ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ.

ಬಂಟ್ವಾಳ :ದ.ಕ.ಜಿ.ಪಂಚಾಯತ್, ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಕಳ ಕಛೇರಿ ಬಂಟ್ವಾಳ & SVS ದೇವಳ ಆಂಗ್ಲಮಾ.ಶಾ. ಬಂಟ್ವಾಳ ಸಂಯುಕ್ತ ಆಶ್ರಯದಲ್ಲಿ ಎಸ್.ವಿ.ಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ 5ರಂದು ಜರುಗಿದ ಪ್ರಾಥಮಿಕ ಮತ್ತು ಹೈಸ್ಕೂಲ್ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂಧ್ಯಾವಳಿಯಲ್ಲಿ ಹುಡುಗರ ಮತ್ತು ಹುಡುಗಿಯರ ಎಲ್ಲಾ 4 ವಿಭಾಗದಲ್ಲಿ ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ಪ್ರಥಮ ಸ್ಥಾನ ಗಳಿಸಿದೆ.

ಪ್ರಾಥಮಿಕ ವಿದ್ಯಾರ್ಥಿನಿಯರ ವಿಭಾಗದಲ್ಲಿ ಇಶ ಅನ್ವಿ, ಧನ್ಯ, ದೃಷ್ಯ, ಸುಶ್ಮಿತ, ಆರಾಧ್ಯ ಪ್ರಾಥಮಿಕ ವಿದ್ಯಾರ್ಥಿಗಳ ವಿಭಾಗದಲ್ಲಿ ದಕ್ಷತ್, ರೋಹನ್, ಅನಂತ್ ರಾಮ್, ದಿಗಂತ್, ಸಮನ್ವಿತ್ ಹೈಸ್ಕೂಲ್  ವಿದ್ಯಾರ್ಥಿಗಳ ವಿಭಾಗದಲ್ಲಿ ಯಶ್ ರಾಜ್, ಚಿನ್ಮಯಿ, ವಿಷ್ಣು, ಧ್ಯಾನ್, ಜಸ್ಟಿನ್,ಹೈಸ್ಕೂಲ್ ವಿದ್ಯಾರ್ಥಿನಿಯರ ವಿಭಾಗದಲ್ಲಿ ವೈಭವಿ,ಮನ್ಮತ, ಆತ್ಮಕ, ನಿಷ್ಕ್ರಿತ, ಲಾಸ್ಯ ಇವರುಗಳು ಆಟಗಾರರಾಗಿ

ಭಾಗವಹಿಸಿದ್ದರು

ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಭಾಮಿ ನಾಗೇಂದ್ರನಾಥ ಶೆಣೈ( ಕರೆಸ್ಪಾಂಡೆಂಟ್), ಅಶೋಕ್ ಶೆಣೈ( ಮೆನೆಜಿಂಗ್ ಟ್ರಸ್ಟಿ, ರೋಶನಿ ತಾರ ಡಿ'ಸೋಜ(ಹೈ.ಮುಖ್ಯೋಪಾಧ್ಯಾಯರು), ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶಿವಪ್ರಸಾದ್‌ ಶೆಟ್ಟಿ, ಪ್ರಾ.ಮು.ಜಾನಕಿ ರಾಜೇಶ್, ದೈಹಿಕ ಶಿಕ್ಷಕಿ ವೇದಾವತಿ, ಮುರುಳೀಧರ್, ಚಂದ್ರಹಾಸ ಇವರುಗಳು ಭಾಗವಹಿಸಿದ್ದರು.ತೀರ್ಪುಗಾರಾಗಿ ಚಿನ್ನಪ್ಪ ( ದೈಹಿಕ ಶಿಕ್ಷಕರು) ಮತ್ತು ಪ್ರತೀಕ್ಷ ಆಗಮಿಸಿದ್ದರು.

Leave a Comment