ಉಳ್ಳಾಲ: ರಾಜ್ಯ ಸರ್ಕಾರದ ಪಾಲು ಬಂಡವಾಳ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು ಇದರ "ಮುಂಗಾರು ಹಂಗಾಮ" ಎಂಬ ಮಳೆಗಾಲದ ಠೇವಣಿಗೆ ಹಾಗೂ ಚಿನ್ನಾಭರಣ ಸಾಲಕ್ಕೆ ಹೊಸ ಆಫರ್ ನೀಡಲಾಗಿದ್ದು, ಇದರ ಕರಪತ್ರ ಬಿಡುಗಡೆ ಕಾರ್ಯಕ್ರಮವು ಮುಡಿಪು ಶಾಖೆಯಲ್ಲಿ ಜೂನ್ 3ರಂದು ಮಂಗಳವಾರ ನಡೆಯಿತು.
ಈ ಸಂದರ್ಭದಲ್ಲಿ ಮುಡಿಪು ಪದ್ಮಶ್ರೀ ಕಾಂಪ್ಲೆಕ್ಸ್ ಮಾಲಕ ನವೀನ್ ಆಚಾರ್ಯ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ನಿರ್ದೇಶಕರಾದ ಪೂವಪ್ಪ ಕಡಂಬಾರು,ಸಿವಿಲ್ ಇಂಜಿನಿಯರ್ ಮುಳೂರು ಶಂಕರಯ್ಯ, ಗ್ರಾಹಕರಾದ ಜಯಪ್ರಭ, ಭಾಗ್ಯಾಲತಾ, ಆನಂದ ಟೈಲರ್, ಮುಡಿಪು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ವ್ಯವಸ್ಥಾಪಕ ರೋಶನ್ ಕುಮಾರ್ ಕೆ, ಸಿಬ್ಬಂದಿ ಭವ್ಯಶ್ರೀ ಕೆ
ಮತ್ತಿತರರು ಉಪಸ್ಥಿತರಿದ್ದರು.
ಮಳೆಗಾಲದ ವಿಶೇಷ ಆಫರ್:
ಒಂದು ವರ್ಷದ ನಿರಖು ಠೇವಣಿಗೆ 10 ಶೇಕಡ ಬಡ್ಡಿ ಹಾಗೂ ಚಿನ್ನಾಭರಣ ಪ್ರತಿ ಗ್ರಾಂ ಗೆ 7777ರಷ್ಟು ಗರಿಷ್ಠ ಸಾಲ ಸೌಲಭ್ಯ,100 ಕ್ಕೆ ಕೇವಲ 85 ಪೈಸೆ ಕನಿಷ್ಠ ಬಡ್ಡಿ ಮಾತ್ರ. ಇದು ಗರಿಷ್ಠ ಸಾಲ -ಕನಿಷ್ಠ ಬಡ್ಡಿ ದರದ ಆಫರ್ ಆಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.














