ಬಂಟ್ವಾಳ: ರಾಜ್ಯ ಸರ್ಕಾರದ ಪಾಲು ಬಂಡವಾಳ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು ಇದರ "ಮುಂಗಾರು ಹಂಗಾಮ" ಎಂಬ ಮಳೆಗಾಲದ ಠೇವಣಿಗೆ ಹಾಗೂ ಚಿನ್ನಾಭರಣ ಸಾಲಕ್ಕೆ ಹೊಸ ಆಫರ್ ನೀಡಲಾಗಿದ್ದು, ಇದರ ಕರಪತ್ರ ಬಿಡುಗಡೆ ಕಾರ್ಯಕ್ರಮವು ಬಿ ಸಿ ರೋಡ್ ಶಾಖೆಯಲ್ಲಿ ಜೂನ್ 5ರಂದು ಗುರುವಾರ ನಡೆಯಿತು.
ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ನಿರ್ದೇಶಕ ಸೇಸಪ್ಪ ಕುಲಾಲ್ ದೀಪ ಪ್ರಜ್ವಲನೆ ಮಾಡಿ ಯೋಜನೆಯ ಬ್ಯಾನರ್ ಬಿಡುಗಡೆಗೊಳಿಸಿ ಸಂಘಕ್ಕೆ ಶುಭ ಹಾರೈಸಿದರು.
ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ನಿರ್ದೇಶಕಿ ರಂಜಿತಾ ಕರಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಕಟ್ಟಡ ಮಾಲಕರಾದ ಜಯರಾಜ್, ದುರ್ಗಾ ಝೆರಾಕ್ಸ್ ಬಿಸಿರೋಡ್ ನ ಶ್ರೀ ಕೃಷ್ಣ ಗ್ರಾಹಕರಾದ ಚಂದಪ್ಪ ಮೂಲ್ಯ ದೇವಂದಬೆಟ್ಟು, ಅಭಿಜಿತ್ ಎ, ಉಪಸ್ಥಿತರಿದ್ದರು.
ಸಹಕಾರ ಸಂಘದ ನಿರ್ದೇಶಕರಾದ
ಸೇಸಪ್ಪ ಕುಲಾಲ್ ಸಹಕಾರ ಸಂಘದ ಠೇವಣಿದಾರರಾದ ಸುನೀತಿ ಯು ಬಿ ರವರಿಗೆ ಠೇವಣಿ ಪತ್ರ ವಿತರಿಸಿದರು.
ಸಿಬ್ಬಂದಿ ಜಯಲಕ್ಷ್ಮಿ ಎಸ್ ಸ್ವಾಗತಿಸಿ. ವ್ಯವಸ್ಥಾಪಕರಾದ ಜಯಪ್ರಕಾಶ್ ಎಂ ವಂದಿಸಿದರು. ಸಿಬ್ಬಂದಿ ಸೌಮ್ಯ ಎನ್ ಸಹಕರಿಸಿದರು .
ಮಳೆಗಾಲದ ವಿಶೇಷ ಆಫರ್:
ಒಂದು ವರ್ಷದ ನಿರಖು ಠೇವಣಿಗೆ 10 ಶೇಕಡ ಬಡ್ಡಿ ಹಾಗೂ ಚಿನ್ನಾಭರಣ ಪ್ರತಿ ಗ್ರಾಂ ಗೆ 7777ರಷ್ಟು ಗರಿಷ್ಠ ಸಾಲ ಸೌಲಭ್ಯ,100 ಕ್ಕೆ ಕೇವಲ 85 ಪೈಸೆ ಕನಿಷ್ಠ ಬಡ್ಡಿಯ ಮಾತ್ರ. ಇದು ಗರಿಷ್ಠ ಸಾಲ -ಕನಿಷ್ಠ ಬಡ್ಡಿ ದರದ ಆಫರ್ ಆಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.














