ಬೆಂಜನಪದವು :ವಿಶ್ವ ಹಿಂದೂ ಪರಿಷದ್ ಭಜರಂಗದಳ, ದುರ್ಗವಾಹಿನಿ ಮಾತೃ ಶಕ್ತಿ. ಮೇ 11-12, ದಶಮಾನೋತ್ಸವ ಸಂಭ್ರಮ,ಶನೈಶ್ವರ ಪೂಜೆ, ಧಾರ್ಮಿಕ ಸಭೆ,ಯಕ್ಷಗಾನ.

Coastal Bulletin
ಬೆಂಜನಪದವು :ವಿಶ್ವ ಹಿಂದೂ ಪರಿಷದ್ ಭಜರಂಗದಳ, ದುರ್ಗವಾಹಿನಿ ಮಾತೃ ಶಕ್ತಿ. ಮೇ 11-12, ದಶಮಾನೋತ್ಸವ ಸಂಭ್ರಮ,ಶನೈಶ್ವರ ಪೂಜೆ, ಧಾರ್ಮಿಕ ಸಭೆ,ಯಕ್ಷಗಾನ.

ಬಂಟ್ವಾಳ : ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವಿನ ರಾಮನಗರದಲ್ಲಿ ವಿಶ್ವ ಹಿಂದೂ ಪರಿಷದ್ ಭಜರಂಗದಳ, ದುರ್ಗವಾಹಿನಿ ಮಾತೃ ಶಕ್ತಿ, ಸುರಭಿ ವೈಷ್ಣವಿ ಗೋ ಮಂದಿರ ಇದರ 10ನೇ ವರ್ಷದ ದಶಮಾನೋತ್ಸವ ಕಾರ್ಯಕ್ರಮವು ಮೇ 11ನೇ ಶನಿವಾರ ಹಾಗೂ 12ನೇ ಭಾನುವಾರ ನಡೆಯಲಿದೆ.

ಮೇ 11ರಂದು ಶನಿವಾರ ಸಂಜೆ 6.00ರಿಂದ ಶನೈಶ್ವರ ಕಥಾವೃತ ಪೂಜೆಯು ಅರ್ಚಕರಾದ ಶಶಿಧರ್ ಭಟ್ ನೇತೃತ್ವದಲ್ಲಿ ನಡೆಯಲಿದೆ. ಬಳಿಕ ಸಂಜೆ 8.00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣವನ್ನು ಸ್ವಾಮಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಮಾಡಲಿದ್ದಾರೆ.ಯೋಗಿಕೌಸ್ತುಭ, ಕರ್ಮಯೋಗಿ ಶ್ರೀ ಶ್ರೀ ಶ್ರೀ ಮೊಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಾಚನ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಶರಣ್ ಪಂಪ್‌ವೆಲ್, ರಘು ಜೀ ಸಕ್ಷೇಶ್‌ಪುರ ಸಹಿತ ಅನೇಕ ಪ್ರಮುಖ ಗಣ್ಯರು

ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಾತ್ರಿ 9.30ಕ್ಕೆ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ ಭಕ್ತಿಗೀತೆ, ಭಾವಗೀತೆ, ಜನಪದಗೀತೆ ಮತ್ತು ದಾಸರ ಪದಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಮೇ 12ರಂದು ಆದಿತ್ಯವಾರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಮೂಲ್ಕಿ, ದ.ಕ. ಇವರಿಂದ "ಪರೆಕೆದ ಪಲ್ಲೆಂಕಿ"ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ 8.30ಗೆ ಚೌಕಿ ಪೂಜೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆ ತಿಳಿಸಿದೆ.



Leave a Comment