ನಾಣ್ಯ :"ಸಂಸ್ಕಾರ ಸೌರಭ"ಬೇಸಿಗೆ ರಜಾ ಹಬ್ಬದ ಸಮಾರೋಪ ಸಮಾರಂಭ. ಶಿಬಿರಗಳಿಂದ ಮಕ್ಕಳ ಪ್ರತಿಭೆ ಅನಾವರಣ: ಬಾಲಕೃಷ್ಣ ಕಿಣಿ

Coastal Bulletin
ನಾಣ್ಯ :"ಸಂಸ್ಕಾರ ಸೌರಭ"ಬೇಸಿಗೆ ರಜಾ ಹಬ್ಬದ ಸಮಾರೋಪ ಸಮಾರಂಭ. ಶಿಬಿರಗಳಿಂದ ಮಕ್ಕಳ ಪ್ರತಿಭೆ ಅನಾವರಣ: ಬಾಲಕೃಷ್ಣ ಕಿಣಿ

ಬಂಟ್ವಾಳ :ಮಕ್ಕಳಲ್ಲಿ ಸ್ತುಪ್ತವಾಗಿರುವ ಶಕ್ತಿ ಹೊರತರಲು ತಾಯಿ ಅಥವಾ ಗುರುವಿನಿಂದ ಸಾಧ್ಯ ಶಿಬಿರಗಳಿಂದ ಮಕ್ಕಳ ಪ್ರತಿಭೆ ಅನಾವರಣ ಗೊಳ್ಳುತ್ತದೆ, ಮಕ್ಕಳಲ್ಲಿ ಬೇರೆ ಬೇರೆ ಕಲೆ ಅಥವಾ ಇತರಪ್ರತಿಭಾ ಶಕ್ತಿಗಳಿದೆ, ಮಕ್ಕಳನ್ನು ತಿದ್ದಿ ಸುಸಂಸ್ಕೃತರನ್ನಾಗಿ ಮಾಡುವ ಶಕ್ತಿ ತಾಯಿಗೆ ಇದೆ, ಸುಸಂಸ್ಕೃತಿ ಇದ್ದಲ್ಲಿ ಶಕ್ತಿ ಇದೆ ಎಂದು ಶ್ರೀ ಕ್ಷೇತ್ರ ನಾಣ್ಯದಲ್ಲಿ ಜರಗಿದ ಸಂಸ್ಕಾರ ಭಾರತೀಯ "ಸಂಸ್ಕಾರ ಸೌರಭ"ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತೃ ವಂದನ ಕಾರ್ಯಕ್ರಮವನ್ನು ಉದ್ದೇಶಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗ್ರಾಮ ವಿಕಾಸದ ಕರ್ನಾಟಕ ಪ್ರಾಂತ ಸಂಯೋಜಕರಾದ ಬಾಲಕೃಷ್ಣ ಕಿಣಿ ಹೇಳಿದರು.

ಅತಿಥಿಯಾಗಿ ಬೆಳ್ತಂಗಡಿ ತಾಲೂಕು ಸಂಸ್ಕಾರ ಭಾರತಿ ಅಧ್ಯಕ್ಷ ಸಂಪತ್ ಸುವರ್ಣ ಮಾತನಾಡಿ, ಪ್ರಪಂಚಕ್ಕೆ ಆಧ್ಯಾತ್ಮಿಕ ಬೆಳಕು ನೀಡಿದ ದೇಶ ಭಾರತ, ಇಂದು ವಿಶ್ವ ಭಾರತದೆಡೆಗೆ ಮುಖ ಮಾಡಿದೆ ಮಕ್ಕಳಿಗೆ ಇಂತಹ ಶಿಬಿರದ ಮೂಲಕ ಸಂಸ್ಕಾರ ದೊರೆತಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಶಿಬಿರದಲ್ಲಿ ತೊಡಗಿದ ಮಕ್ಕಳು ಕಲೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿದ ಉದಾಹರಣೆಗಳಿವೆ ಎಂದು ಹೇಳಿದರು.

ಸಂಸ್ಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಟಿ  ತಾರಾನಾಥ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಪ್ರೊ. ಚೇತನ್ ಮುಂಡಾಜೆ ಸಂದರ್ಭೋಚಿತವಾಗಿ ಮಾತನಾಡಿದರು.ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಧವ ನಾಣ್ಯ, ಸಂಯೋಜಕಿ ಉಮಾ ಚಂದ್ರಶೇಖರ್, ಪುದು ಗ್ರಾ ಪಂ ಸದಸ್ಯ ಮನೋಜ್ ಆಚಾರ್ಯ ನಾಣ್ಯ, ವಿದ್ಯಾಶೇಖರ್ ಕುಮ್ದೇಲ್, ರಾಮಚಂದ್ರ ಬಂಗೇರ ದಾಮೋದರ್ ನೆತ್ರಕೆರೆ ನವೀನ್ ಚಾಪೆ ಉಪಸ್ಥಿತರಿದ್ದರು.

ಜಗದೀಶ್

ಕಡೆಗೋಳಿ ಸ್ವಾಗತಿಸಿದರು, ಸುಮಾರು 135 ಮಕ್ಕಳು ಶಿಬಿರದ ಪ್ರಯೋಜನ ಪಡೆದರು.5 ದಿನದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ರಾಜ್ ಕಿದೂರ್,ಯೋಗಚಾರ್ಯ ಪುಡಾರಿಕ್ಷ ಬೆಳ್ಳೂರ್, ಅರುಣ್ ಉಳ್ಳಾಲ್, ದಿನೇಶ್ ಸುವರ್ಣ ರಾಯಿ, ಪ್ರಶಾಂತ್ ಏರಮಾಲೆ, ನವೀನ್ ಪಿಲಾರ್, ಉದಯಕುಮಾರ್ ಜ್ಯೋತಿಗುಡ್ಡೆ, ಶಾಂತ ಕುಂಠಿಣಿ ದಿವ್ಯ ರಾಘವೇಂದ್ರ, ಅಶೋಕ್ ತುಂಬೆ, ಭಾಗವಹಿಸಿದರು.

ಶಿಬಿರದ ನಿರ್ವಹಣೆಯಲ್ಲಿ ಕುಮಾರಿ ಮನಿಷಾ ಕೊಡ್ಮಾಣ್, ಮೇಘ ಕಜೆ, ವಿಸ್ಮಿತಾ ಪಚ್ಚಿನಡ್ಕ, ಭುವನೇಶ್ವರಿ,ಲತಾ ಶ್ರೀನಿವಾಸ್ ತುಂಬೆ, ಹರ್ಷಿತ ಸುಜಿರ್,ಯಶಸ್ವಿನಿ ಕುಟ್ಟಿಕಳ ಶ್ರಾವ್ಯ ರೊಟ್ಟಿಗುಡ್ಡೆ ಸಹಕರಿಸಿದರು. ಶಾರೀರಿಕ ಚಟುವಟಿಕೆಗಳನ್ನು ಮನೋಹರ ಕಂಜತೂರ್, ಸುರೇಶ್ ಕುಮ್ದೇಲ್,ಮದ್ವಿನ್ ರಾಜ್,ವರದರಾಜ್ ನೆತ್ತರಕೆರೆ, ಕಿರಣ್ ಕುಮ್ದೇಲ್ ನಡೆಸಿಕೊಟ್ಟರು.

ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನ ನೆರವೇರಿತು, ಪೋಷಕರ ಪರವಾಗಿ ವಾಣಿ ರಾಜೇಶ ಅಭಿಪ್ರಾಯ ಹಂಚಿಕೊಂಡರು, ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಅಭಿನಂದನ ಪತ್ರವನ್ನು ವಿತರಿಸಲಾಯಿತು.

Leave a Comment