ಬಿ ಸಿ ರೋಡ್ :ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಭಾಷೆಯನ್ನು ಸಮರ್ಥ ಬಳಸಿ ಸಾಹಿತ್ಯ ರಚಿಸಿದಾಗ ಸಾರ್ಥಕ ಭಾವ: ಅಬೂಬಕರ್ ಅಮ್ಮುಂಜೆ

Coastal Bulletin
ಬಿ ಸಿ ರೋಡ್ :ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಭಾಷೆಯನ್ನು ಸಮರ್ಥ ಬಳಸಿ ಸಾಹಿತ್ಯ ರಚಿಸಿದಾಗ ಸಾರ್ಥಕ ಭಾವ: ಅಬೂಬಕರ್ ಅಮ್ಮುಂಜೆ

ಬಂಟ್ವಾಳಃ ಭಾಷೆಯನ್ನು ಸಮರ್ಪಕವಾಗಿ ಬಳಕೆ ಮಾಡಿ ಉತ್ತಮ ಸಾಹಿತ್ಯ ರಚಸಿ ಓದುಗರ ಶೋತೃಗಳ ಮನಸನ್ನು ಗೆದ್ದಾಗ ಉದ್ದೇಶ ಸಾರ್ಥಕ ಆಗುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ, ಸಂಘಟಕ ,ಕವಿ ಅಬೂಬಕರ್ ಅಮ್ಮುಂಜೆ ಹೇಳಿದರು.

ಅವರು ಭಾನುವಾರ ಬಿ.ಸಿ.ರೋಡಿನ *ಕನ್ನಡ ಭವನ* ದಲ್ಲಿ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದರು. ‌ಪರಿಷತ್ತಿನ ಹುದ್ದೆಯನ್ನು ವಹಿಸಿಕೊಂಡರಷ್ಟೇ ಸಾಲದು ಪರಿಷತ್ತಿನ ಉದ್ದೇಶವನ್ನು ಕನ್ನಡಿಗರಿಗೆ ತಿಳಿಸುವಂತಹ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದು ಅನಿವಾರ್ಯ ಎಂದರು.

ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಸಾರಥ್ಯವನ್ನು ನೀರ್ಪಾಜೆ ಭೀಮ ಭಟ್ಟರಿಂದ ವಿಶ್ವನಾಥ ಬಂಟ್ವಾಳ ತನಕ ಹಲವರು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು‌‌ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳ ಪೈಕಿ ಬಂಟ್ವಾಳ ತಾಲ್ಲೂಕಿನಲ್ಲಿ ಇರುವಷ್ಟು ದತ್ತಿ ಉಪನ್ಯಾಸಗಳು ಇನ್ನೆಲ್ಲೂ ಇಲ್ಲ‌ ಜಿಲ್ಲೆ,ರಾಜ್ಯ ಮತ್ತು ರಾಷ್ಟ್ರಕ್ಕೆ ಉತ್ತಮ ಸಾಹಿತಿಗಳನ್ನು, ಕಲಾವಿದರನ್ನು ರಂಗಕರ್ಮಿಗಳು,

ರಾಜಕಾರಣಿಗಳನ್ನು ,ಪತ್ರಕರ್ತರ ನ್ನು, ಶಿಕ್ಷಣ ತಜ್ಞರಬ್ನು ಸಾಮಾಜಿಕ ಧಾರ್ಮಿಕ ಮಯಖಂಡರನ್ನು ಬಂಟ್ವಾಳ ತಾಲೂಕು ನೀಡಿದೆ ಎಂದರು.

ಮಾದರಿ ಸಮ್ಮೇಳನ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ಅಮ್ಮುಂಜೆಯಲ್ಲಿ ನಡೆದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉಲ್ಲೇಖಿಸಿ ರಾಜ್ಯಕ್ಕೆ ಮಾದರಿ ಎನಿಸಿದ ಇಂತಹ ಸಮ್ಮೇಳನಗಳು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ನಡೆಯಬೇಕು ಎಂದರು. ತಾಲೂಕು ಘಟಕ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಹೋಬಳಿ ಸಮ್ಮೇಳನಗಳು ನಡೆಯಲಿವೆ ಎಂದರು.

ಕಾರ್ಯಕಾರಿ ಸಮಿತಿ ಸದಸ್ಯ ಜಯರಾಮ ಪಡ್ರೆ ಸ್ವಾಗತಿಸಿ, ವಂದಿಸಿದರು.ಪ್ರಸ್ತಾವನೆಗೈದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವಿ.ಸು. ಭಟ್ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Comment