ಬಂಟ್ವಾಳ: ಪತ್ರಿಕಾ ವರದಿಗಾರ ಸಂದೀಪ್ ಸಾಲ್ಯಾನ್ ಅವರ ಮಾಧ್ಯಮ ಸೇವೆ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಬಂಟ್ವಾಳ ಲಯನ್ಸ್ ಕ್ಲಬ್ ಬಂಟ್ವಾಳದ ವತಿಯಿಂದ ಗೌರವಿಸಲಾಯಿತು.
ಇತ್ತೀಚೆಗೆ ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ ಪ್ರಾಂತ್ಯ ಅಧ್ಯಕ್ಷ ಲಯನ್ ಯೂಜಿನ್ ಲೋಬೋ ರವರ ಅಧಿಕೃತ ಭೇಟಿ ಕಾರ್ಯಕ್ರಮದ ವೇಳೆ ಲಯನ್ಸ್ ಸೇವಾ ಮಂದಿರದಲ್ಲಿ ಪ್ರಾಂತ್ಯಧ್ಯಕ್ಷರು ಗೌರವಿಸಿದರು. ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ್ಯದ ರಾಯಭಾರಿ ಲಯನ್ ಕೃಷ್ಣ ಶ್ಯಾಮ್,
ವಲಯಾಧ್ಯಕ್ಷ ಉಮೇಶ್ ಪಿ , ಕ್ಲಬ್ ಪೂರ್ವಾಧ್ಯಕ್ಷರು, ಸದಸ್ಯರು, ಪ್ರಾಂತ್ಯದ ಇತರ ಕ್ಲಬ್ ಗಳ ಅಧ್ಯಕ್ಷರುಗಳು, ಸದಸ್ಯರು ಕಾರ್ಯದರ್ಶಿ ದೇವಿಕಾ ದಾಮೋದರ್ , ಕೋಶಾಧಿಕಾರಿ ದೇವಪ್ಪ ಪೂಜಾರಿ, ಲಿಯೋ ಅಧ್ಯಕ್ಷೆ ಖುಷಿ ಟಿ. ಶೆಟ್ಟಿ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.














