ಹೆಣ್ಣು ಅಬಲೆಯಲ್ಲ, ಸಬಲೆ ಎಂದು ನಾವು ಎಷ್ಟೇ ಹೇಳಿದರೂ ಸಹ ಆಕೆಗೊಂದು ವ್ಯವಸ್ಥಿತ ಭದ್ರತೆಯಿಲ್ಲ. ಜಗತ್ತಿಗೆ ಬರುವ ಮುನ್ನವೂ ಆಕೆಗೆ ಅಗ್ನಿ ಪರೀಕ್ಷೆ, ಬಂದ ಮೇಲೂ ಕೂಡ ಹೆಜ್ಜೆ ಹೆಜ್ಜೆಗೂ ಶೋಷಣೆ, ಹಿಂಸೆ, ಕಿರುಕುಳವನ್ನು ಎದುರಿಸ ಬೇಕಾದಂತಹ ದಾರುಣ ಸ್ಥಿತಿ ಈ ಮಹಿಳೆಯದ್ದು. ಅಂತಹ ಸಂದೇಶವನ್ನು ಇಟ್ಟುಕೊಂಡು ಶ್ರೀ ಶೈಲ ಪ್ರೊಡಕ್ಷನ್ಸ್ ನಿಂದ "ಶಾಂಭವಿ"ಎಂಬ ಕಿರುಚಿತ್ರವು ಮನೋಜ್ಞವಾಗಿ ಮೂಡಿಬಂದಿದೆ.
ಈ ಚಿತ್ರದಲ್ಲಿ ಹೆಣ್ಣು ಜೀವನದಲ್ಲಿ ಎಷ್ಟು ಸ್ವಾಭಿಮಾನದಿಂದ ಬದುಕಿ ಎಲ್ಲರಿಗೂ ಹೇಗೆ ಮಾದರಿಯಾಗುತ್ತಾಲೇ ಎಂಬುದನ್ನು ಬಹಳ ಚೆನ್ನಾಗಿ ಬಿಂಬಿಸಿದ್ದಾರೆ.
ಹೆಣ್ಣು ತನ್ನವರಿಗಾಗಿ ತನ್ನ ಸರ್ವಸ್ವವನ್ನೇ ಸವೆಸುತ್ತಾಳೆ ಎಂಬ ಮಾತಿನಂತೆ ಈ ಕಿರುಚಿತ್ರದ ನಾಯಕಿ ತನ್ನ ಮನೆ ನಿಭಾಯಿಸಲು ಕೆಲಸಕ್ಕೆ ಹೋಗುತ್ತಿರುತ್ತಾಳೆ. ಆದರೆ ಆಕೆಗೆ ಎಲ್ಲಿಯೂ ಸರಿಯಾಗಿ ಕೆಲಸ ಮಾಡಲು ಆಗುತ್ತಿರಲ್ಲಿಲ್ಲ. ಕಾರಣ ಹೆಣ್ಣಿನ ಮೇಲೆ ಆಗುವ ಶೋಷಣೆ . ಹಾಗಾಗಿ ಆಕೆ ಸ್ವಾಭಿಮಾನದಿಂದ ಕೆಲಸ ಬಿಟ್ಟು ಹೆಣ್ಣು ಮಕ್ಕಳಿಗಾಗಿಯೇ ವಾಯ್ಸ್ ಆಫ್ ವುಮೆನ್ಸ್ ಎಂಬ ಸಾಮಾಜಿಕ ಮಾಧ್ಯಮವನ್ನು ಹುಟ್ಟು ಹಾಕಿ, ಅದರಲ್ಲಿ ಹೆಣ್ಣಿನ ಮೇಲೆ ಆಗುವ ಪ್ರತಿಯೊಂದು ಹಿಂಸೆ, ಶೋಷಣೆಯ ಬಗ್ಗೆ ಧ್ವನಿಯಾಗಿ
ಎಲ್ಲರ ಮನೆಮಗಳಾಗುವುದೇ ಈ ಕಿರುಚಿತ್ರದ ಸಂಗತಿ.
ಎಲ್ಲರೂ ಒಮ್ಮೆ ನೋಡಲೇಬೇಕಾದ ಈ ಕಿರುಚಿತ್ರದಲ್ಲಿ ನಾಯಕಿಯಾಗಿ ಕಿತ್ತೂರು ರಾಣಿ ಚೆನ್ನಮ ರಾಜ್ಯ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ,ಶೈಲಜಾ ರಾಜೇಶ ಪೂಜಾರಿ ಅವರ ಮನೋಜ್ಞ ಅಭಿನಯ ಗಮನ ಸೆಳೆಯುತ್ತದೆ, ಅನುಭವಿ ರಂಗ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ ಸಹಿತ ಎಲ್ಲಾ ಪಾತ್ರಗಳ ನಟನೆ ಉತ್ತಮವಾಗಿದೆ.
ಶೈಲಜಾ ಮತ್ತು ಡಾ.ರಮೇಶ್ ಪೂಜಾರಿ ನಿರ್ಮಾಣದ ಈ ಕಿರುಚಿತ್ರದಲ್ಲಿ, ನಿರ್ದೇಶಕರಾಗಿ ರಜಾಕ್ ಪುತ್ತೂರು, ಮ್ಯೂಸಿಕ್ ಅಶ್ವಿನ್ ಹಾಗೂ ಮುರಳೀಧರ್ ವಿಟ್ಲ, ಸವಿತಾ ಅವಿನಾಶ್ ಹಾಡಿದ್ದಾರೆ.
ಶ್ರೀ ಶೈಲ ಪ್ರೊಡಕ್ಷನ್ ಯುಟ್ಯೂಬ್ ಚಾನೆಲ್ ನಲ್ಲಿ https://youtu.be/0vxhkbkkR5E ಈ ಲಿಂಕ್ ಮೂಲಕ ಕಿರು ಚಿತ್ರವನ್ನು ಆಸಕ್ತರು ನೋಡಬಹುದಾಗಿದೆ.
















