Coastal Bulletin

ಬಂಟ್ವಾಳ :ರೋಟರಿ ಕ್ಲಬ್ ಮಿಸ್ತಿ ಹಿಲ್ಸ್ ಮಡಿಕೇರಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಸಿರಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸದಸ್ಯ ರೋ ಹನೀಫ್ ಕೋಸ್ಟಲ್ ರವರು ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ.

ರೋಟರಿ ಕ್ಲಬ್ ಮಿಸ್ತಿ ಹಿಲ್ಸ್ ಮಡಿಕೇರಿಯಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರ ಪರವಾಗಿ ,ಪದಕವನ್ನು ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ಅಧ್ಯಕ್ಷರಾದ ರೋ ಚಿತ್ತರಂಜನ್ ಶೆಟ್ಟಿ ಅವರು

ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ರವರಿಂದ ಪಡೆದು ಕೊಂಡರು, ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರೋ ಎನ್ಎಸ್ ಹೆಗಡೆ ಅಸಿಸ್ಟೆಂಟ್ ಗವರ್ನರ್ ರೋ ಮಂಜುನಾಥ್ ಆಚಾರ್ಯ ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು.

Leave a Comment