ಬಂಟ್ವಾಳ :ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ) ಇದರ ನೂತನ ಸಭಾಭವನ "ಶ್ರೀಶಾರದಾ ನಿಕೇತನ" ಸಮುದಾಯ ಭವನದ ಭೂಮಿ ಪೂಜೆಯು ಸೆ.05 ರಂದು ಸೋಮವಾರ ಬೆಳಿಗ್ಗೆ ಕಳ್ಳಿಗೆ ಗ್ರಾಮದ ಕಂಜತ್ತೂರಿನಲ್ಲಿ ಟ್ರಸ್ಟ್ ನ ನಿವೇಶನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರು, ಶ್ರೀ ಶಾರದ ಪೂಜಾ ಮಹೋತ್ಸವದ
ಪದಾಧಿಕಾರಿಗಳು ಮತ್ತು ಕೌಸಲ್ಯ ಮಹಿಳಾ ವಿಶ್ವಸ್ತ ಮಂಡಳಿಯ ಸದಸ್ಯೆಯರು ಮತ್ತಿತರರು ಉಪಸ್ಥಿತರಿದ್ದರು.














