ಬಂಟ್ವಾಳ :ಶ್ರೀ. ಕ್ಷೇ.ಧ ಗ್ರಾ ಯೋಜನೆ ಬಿ.ಸಿ ಟ್ರಸ್ಟ್ (ರಿ) ಬಂಟ್ವಾಳ ಹಾಗೂ ರೋಟರಿ ಕ್ಲಬ್ ಇವರ ಜಂಟಿ ಅಶ್ರಯದಲ್ಲಿ ಸರಕಾರಿ ಪಾಲಿಟೆಕ್ನಿಕಲ್ ಕಾಲೆಜೀನಲ್ಲಿ ಶಾಲಾ ವನ ಕಾರ್ಯಕ್ರಮವು ಸೆ 5ರಂದು ಸೋಮವಾರ ನಡೆಯಿತು.
ಶಾಲಾ ಆವರಣದಲ್ಲಿ ಸುಮಾರು ನೂರಕ್ಕೆ ಅಧಿಕ ಸಂಖ್ಯೆ ಯ ಹಣ್ಣು ಹಂಪಲು ಹಾಗೂ ಇತರೆ ಗಿಡಗಳನ್ನು ನೆಡುವ ಕಾರ್ಯಕ್ಕೆ, ದ.ಕ.ಜಿಲ್ಲಾ ನಿರ್ದೇಶಕರು ಸತೀಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ ಮಾತನಾಡಿ ಶುಭ ಹಾರೈಸಿದರು.ರೋಟರಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಆಚಾರಿ ನಮ್ಮ ಸಂಸ್ಥೆಯ ವತಿಯಿಂದ ಶಾಲೆಗೆ ಯಾವುದೇ ಅಗತ್ಯ ಸಹಕಾರ
ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷ ಧ.ಗ್ರಾ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ ರೋಟರಿ ಅದ್ಯಕ್ಷರು ಪುಪ್ಪರಾಜ್ ಹೆಗ್ಡೆ ರಾಜೇಂದ್ರ ನಾರಯಣ ಹೆಗ್ಡೆ,ರೀತಿಶ್ ಬಾಳಿಗ,ಬಾವನಿ ಶಂಕರ್,ಪ್ರಕಾಶ್ ಬಾಳಿಗ, ಉಪನ್ಯಾಸಕರು ಚಿತ್ರ ಕುಮಾರ ಜನಜಾಗೃತಿ ವೇದಿಕೆ ಅಧ್ಯಕ್ಷರು ರೋನ್ಡ್ ಡಿಸೋಜ, ಸೇವಾಪ್ರತಿನಿಧಿ ಉಷಾ ,ಸಂಪ, ರೋಹಿನಿ,ನಿಸ್ಮಿತ, ಹಾಜರಿದ್ದರು ಕೃಷಿ ಮೇಲ್ವಿಚಾರಕರು ಜನಾರ್ದನ ಎಲ್ಲರಿಗೂ ಸ್ವಾಗತಿಸಿದರು, ಕೇಶವ ಕೆ ವಂದಿಸಿದರು














