ಪಾಣೆಮಂಗಳೂರು: ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ಆತ್ಮಹತ್ಯೆಗೆ ಶರಣು.

Coastal Bulletin
ಪಾಣೆಮಂಗಳೂರು: ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ಆತ್ಮಹತ್ಯೆಗೆ ಶರಣು.

ಬಂಟ್ವಾಳ: ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ( 55) ಅವರು ಪಾಣೆಮಂಗಳೂರು ನೇತ್ರಾವತಿ ನದಿ ಕಿನಾರೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ. 5ರಂದು ಗುರುವಾರ ನಡೆದಿದೆ. ಸಂಜೆ 4.30 ಗಂಟೆ ವೇಳೆಗೆ ಬೈಕ್ ನಿಲ್ಲಿಸಿದ ಸಮೀಪದಲ್ಲಿ ಇರುವ ಪುರಸಭೆ ಇಲಾಖೆಗೆ ಸೇರಿದ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಮೃತದೇಹ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬೆಳಿಗ್ಗೆ ಸುಮಾರು 11 ಗಂಟೆಗೆ ಪುತ್ತೂರಿನಿಂದ ಬೈಕಿನಲ್ಲಿ ಬಂದ ರಮೇಶ್ ರೈ ಅವರು ಪಾಣೆಮಂಗಳೂರು ಹಳೆಯ ಸೇತುವೆ ಕೆಳಭಾಗದಲ್ಲಿ ಬೈಕ್ ನಿಲ್ಲಿಸಿ, ಶರ್ಟ್ ಕಳಚಿ, ಪರ್ಸ್,ಚಪ್ಪಲಿ ಹಾಗೂ ಮೊಬೈಲ್ ಬಿಟ್ಟು ಕಾಣೆಯಾಗಿದ್ದರು.ರಮೇಶ್ ರೈ ಆತ್ಮಹತ್ಯೆ ‌ಮಾಡಿಕೊಳ್ಳಲು ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.

ಹಲವು ವರ್ಷಗಳಿಂದ ಸುಳ್ಯ ಪುತ್ತೂರು ಭಾಗದಲ್ಲಿ

ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು.ಬಿಜೆಪಿ ಸಕ್ರೀಯ ಕಾರ್ಯಕರ್ತನಾಗಿದ್ದು, ಒಂದು ಬಾರಿ ಪುರಸಭೆ ಸದಸ್ಯನಾಗಿ ಮತ್ತು ಇದೀಗ ಎರಡನೇ ಬಾರಿ ನಗರ ಸಭಾ ಸದಸ್ಯನಾಗಿ ಆಯ್ಕೆಯಾಗಿದ್ದರು.

ಮೃತರು ಪತ್ನಿ ಹಾಗೂ ಒಂದು ಗಂಡು ಮತ್ತು ಒಂದು ಹೆಣ್ಣು ಮಗಳ ಸಹಿತ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.ಮಗಳು ವಿದ್ಯಾರ್ಥಿನಿಯಾಗಿದ್ದು ಮಗ ಟೌನ್ ಬ್ಯಾಂಕ್ ಉದ್ಯೋಗಿಯಾಗಿದ್ದಾನೆ.

Leave a Comment