breaking news

Coastal Bulletin

ಮಂಗಳೂರು :ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್ (ರಿ.) ಇದರ ಆಶ್ರಯದಲ್ಲಿ ಮಾಜಿ ಶಾಸಕರಾದ ದಿವಂಗತ ಎನ್. ಶಿವರಾವ್ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.

ಸಂಘದ ಗೌರವಾಧ್ಯಕ್ಷರಾದ ಎನ್. ರವಿರಾಜ್ ರಾವ್ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು. ಅಧ್ಯಕ್ಷರಾದ ಪ್ರಶಾಂತ್ ಸಲ್ದಾನ, ಮಾಜಿ ಅಧ್ಯಕ್ಷರುಗಳಾದ ದಾಮೋದರ ಪೆರ್ಮಂಕಿ, ಭಾಸ್ಕರ ಅಮೀನ್ ಮತ್ತು ಶ್ರೀಧರ ಪಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶ್ರೀನಾಥ್ ಸಾಲಿಯಾನ್ ಮಾತನಾಡಿ ದಾನಿಗಳು ನೀಡಿದ

ಈ ಕೊಡುಗೆಯನ್ನು ಸದುಪಯೋಗ ಗೊಳಿಸುವುದರೊಂದಿಗೆ ಎಲ್ಲರೂ ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಮತ್ತು ಸಮಾಜದ ಋಣ ತೀರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಈ ಬಾರಿ ಒಟ್ಟು 90 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ವಿದ್ಯಾರ್ಥಿಗಳು,ಪೋಷಕರು ಮತ್ತು ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು

Leave a Comment