ನೆತ್ತರಕೆರೆ : ನವೋದಯ ಮಿತ್ರ ಕಲಾ ವೃಂದ (ರಿ.) ನೇತ್ರಾವತಿ ಮಾತೃ ಮಂಡಳಿ, ಎ.13ರಂದು, 37ನೇ ವಾರ್ಷಿಕೋತ್ಸವ ಸಮಾರಂಭ, ಕೊಡ್ಡಾಣ್ ಕಾಂತಪ್ಪ ಶೆಟ್ಟಿ ಪ್ರತಿಭಾ ಪುರಸ್ಕಾರ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ. ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ.

Coastal Bulletin
ನೆತ್ತರಕೆರೆ : ನವೋದಯ ಮಿತ್ರ ಕಲಾ ವೃಂದ (ರಿ.) ನೇತ್ರಾವತಿ ಮಾತೃ ಮಂಡಳಿ, ಎ.13ರಂದು, 37ನೇ ವಾರ್ಷಿಕೋತ್ಸವ ಸಮಾರಂಭ, ಕೊಡ್ಡಾಣ್ ಕಾಂತಪ್ಪ ಶೆಟ್ಟಿ ಪ್ರತಿಭಾ ಪುರಸ್ಕಾರ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ. ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ.

ಬಂಟ್ವಾಳ :ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ (ರಿ.) ಹಾಗೂ ನೇತ್ರಾವತಿ ಮಾತೃ ಮಂಡಳಿ,ನೆತ್ತರಕೆರೆ ಇದರ 37ನೇ ವಾರ್ಷಿಕೋತ್ಸವ ಸಮಾರಂಭವು ಎ.13ರಂದು ಶನಿವಾರ ನೆತ್ತರಕೆರೆ ಶಾಲಾ ಮೈದಾನದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ ಗಂಟೆ 9ಕ್ಕೆ ಅಶ್ವತ್ಥಕಟ್ಟೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ಗಂಟೆ 6-30ರಿಂದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಕಳ್ಳಿಗೆ ನೆತ್ತರಕೆರೆ ಇಲ್ಲಿನ ಮಕ್ಕಳಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ.


ರಾತ್ರಿ ಗಂಟೆ 8-00ಕ್ಕೆವಾರ್ಷಿಕೋತ್ಸವ ಸಮಾರಂಭ ನಡೆಯಲಿದ್ದು ಅಧ್ಯಕ್ಷತೆಯನ್ನು ದೇವಿಪ್ರಸಾದ್ ಶೆಟ್ಟಿ ಕಾರ್ಯದರ್ಶಿ, ವಿಶ್ವ ಹಿಂದು ಪರಿಷದ್, ಮಂಗಳೂರು ವಿಭಾಗ ಇವರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಖ್ಯಾತ ವೈದ್ಯರು ಡಾ| ವೀಣಾ ತೋಳ್ತಾಡಿ ,ಬಿ. ಸಿ. ರೋಡು ಉಪಸ್ಥಿತರಿರುವರು. ನಿವೃತ್ತ

ಅಂಗನವಾಡಿ ಶಿಕ್ಷಕಿ ಶಶಿಕಲ ದಯಾನಂದ ನೆತ್ತರಕೆರೆ ಸನ್ಮಾನಿಸಲ್ಪಡಲಿದ್ದಾರೆ.

ಕೊಡ್ಡಾಣ್ ಕಾಂತಪ್ಪ ಶೆಟ್ಟಿ ಪ್ರತಿಭಾ ಪುರಸ್ಕಾರ:

ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ಪ್ರಥಮ, ದ್ವಿತೀಯ, ತೃತಿಯ ಸ್ಥಾನವನ್ನು ಪಡೆದು ಅತ್ಯುನ್ನತ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡ್ಡಾಣ್ ಕಾಂತಪ್ಪ ಶೆಟ್ಟಿ ಗೌರವ ಪುರಸ್ಕಾರ ನಡೆಯಲಿದೆ.

ರಾತ್ರಿ ಗಂಟೆ 9-00ರಿಂದ ಸಂಘದ ಸದಸ್ಯರು ಮತ್ತು ಮಾತೃ ಮಂಡಳಿಯ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಮ್ಮ ಕಲಾವಿದೆರ್ ಬೆದ್ರ ಅಭಿನಯದ ತುಳು ಹಾಸ್ಯಮಯ ನಾಟಕ "ಕುಸಲ್ದ ಗೊಬ್ಬು" ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯು ಪ್ರಕಟಣೆ ಯಲ್ಲಿ ತಿಳಿಸಿದೆ.

Leave a Comment