ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಅರ್ಥಿಕವಾಗಿ ಅತಿ ದುರ್ಬಲ ಕುಟುಂಬಗಳಿಗೆ ವಾತ್ಸಲ್ಯಕಿಟ್ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಾಂತ ಸಾವಿರಾರು ಕುಟುಂಬಗಳಿಗೆ ವಾತ್ಸಲ್ಯಕಿಟ್ ಹಸ್ತಾಂತರ ಕಾರ್ಯ ನಡೆಯುತ್ತಿದೆ. ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ 238 ಅತೀ ದುರ್ಬಲ ವಾತ್ಸಲ್ಯ ಕುಟುಂಬಗಳನ್ನು ಗುರುತಿಸಿದ್ದು ಅದರಲ್ಲಿ ಇಂದು ಹನ್ನೊಂದು ಕುಟುಂಬಗಳಿಗೆ ವಾತ್ಸಲ್ಯಕಿಟ್ ಹಸ್ತಾಂತರಿಸಲಾಯಿತು.
ಅಮ್ಮಾಡಿ ಗ್ರಾಮದ ನಮಾರು ಒಕ್ಕೂಟದ ಹೊಳ್ಳರಬೈಲು ಶಾಂಭವಿರವರು ಬೆಂಕಿಗೆ ಆಹುತಿಯಾಗಿ ಮರಣಹೊಂದಿದ ನಂತರ ಅವರ ಮಗ ಪ್ರಶಾಂತ್ ಅನಾಥವಾಗಿದ್ದು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ ಇವರಿಗೆ ಬಂಟ್ವಾಳ ತಾಲೂಕು ಯೋಜನಾಧಿಕಾರಿಗಳಾದ ಜಯಾನಂದ ಪಿ ರವರು ಕಿಟ್
ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ವಾತ್ಸಲ್ಯ ಕಿಟ್ ನಲ್ಲಿ ದಿನನಿತ್ಯ ಬಳಕೆಯ ವಸ್ತ್ರಗಳು, ಪೌಷ್ಟಿಕ ಆಹಾರ ಸಾಮಗ್ರಿ, ಸ್ವಚ್ಚತೆಯ ಸಾಮಗ್ರಿಗಳು ಹಾಗೂ ಮನೆಬಳಕೆ ವಸ್ತುಗಳನ್ನು ಒಳಗೊಂಡಿರುತ್ತದೆ. ತಾಲೂಕು ವ್ಯಾಪ್ತಿಯಲ್ಲಿ ಪ್ರತೀ ತಿಂಗಳು 238 ವಾತ್ಸಲ್ಯ ಕುಟುಂಬಗಳಿಗೆ ತಲಾ ರೂ.1000/- ದಂತೆ 2,38,000/-ಮಾನಾಶನ ವಿತರಣೆ ಮಾಡಲಾಗುತ್ತಿದ್ದು, ಆರ್ಥಿಕ ಸಹಕಾರವನ್ನು ಒದಗಿಸಲಾಗುತ್ತಿದೆ. ಈ ಸಂದರ್ಭ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ, ಒಕ್ಕೂಟದ ಅಧ್ಯಕ್ಷರಾದ ಥಾಮನ್ ಸಲ್ದಾನ, ಮೇಲ್ವಿಚಾರಕರಾದ ಗಿರೀಶ್ ಮತ್ತು ಸೇವಾಪ್ರತಿನಿಧಿಯಾದ ವಿಜಯಲಕ್ಷ್ಮೀರವರು ಉಪಸ್ಥಿತರಿದ್ದರು.














