ಬಂಟ್ವಾಳ : ಕೊರಗಜ್ಜ ಸನ್ನಿಧಿ,ಬೆಂಜನಪದವು ಇಲ್ಲಿನ ಕೊರಗಜ್ಜ ದೈವದ ವಾರ್ಷಿಕ ಗಗ್ಗರ ಸೇವೆಯು ಫೆ.08ರಂದು ಶನಿವಾರ ರಾತ್ರಿ 9-00ರಿಂದ ಬೆಂಜನಪದವು ರಕ್ಷಿತ್ ನಿಲಯದಲ್ಲಿ ನಡೆಯಲಿದೆ.
ಅಂದು ಪೂರ್ವಾಹ್ನ ಗಂಟೆ 8-30ಕ್ಕೆ ಗಣಹೋಮ, ನವಕ ಪ್ರಧಾನ ಹೋಮ ಬಳಿಕ ಭಜನಾ ಕಾರ್ಯಕ್ರಮ ಜರುಗಲಿದೆ.ರಾತ್ರಿ ಗಂಟೆ 8-30ರಿಂದ ಅನ್ನಸಂತರ್ಪಣೆ ಹಾಗೂ 9-00ಕ್ಕೆ ಕೊರಗಜ್ಜ ದೈವದ ಗಗ್ಗರ ಸೇವೆ
ನಡೆಯಲಿದೆ.
09ನೇ ಆದಿತ್ಯವಾರ ರಾತ್ರಿ 7.30ರಿಂದ "ಅಗೇಲು ಸೇವೆ" ನಡೆಯಲಿದೆ ಎಂದು ಸನ್ನಿದಿಯ ಧರ್ಮದರ್ಶಿ ವಿಜಯ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಕೆಯ ಅಗೇಲು ಸೇವೆ ನೀಡುವವರು ಸಂಪರ್ಕಿಸಿ, ಮೊ: 9844582696, 9740281548.














