ಬಂಟ್ವಾಳ :ಮೇರಮಜಲು, ಕೊಡ್ಮಾನ್ ಹಾಗೂ ಕಳ್ಳಿಗೆ ಗ್ರಾಮಗಳನ್ನೊಳಗೊಂಡ ಮೇರಮಜಲು ಮಂಡಲದ ಅಶ್ರಯದಲ್ಲಿ ಫೆ.1ರಂದು ಕಳ್ಳಿಗೆ ಪೆರಿಯೋಡಿಬೀಡು ಬಾಕಿಮಾರು ಗದ್ದೆಯಲ್ಲಿ ನಡೆಯುವ ಹಿಂದೂ ಸಂಗಮದ ಪೂರ್ವಭಾವಿ ಧರ್ಮ ಧ್ವಜಾರೋಹಣ ಹಾಗೂ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮವು ಜ.04ರಂದು ಆದಿತ್ಯವಾರ ನೆರವೇರಿತು.
ಬ್ರಹ್ಮರಕೂಟ್ಲು ಶಿವಾಜಿ ಪ್ರತಿಮೆಯ ಬಳಿ ಪ್ರಗತಿಪರ ಕೃಷಿಕ ಜ್ಯೋತೀಂದ್ರ ಶೆಟ್ಟಿ ಮುಂಡಾಜೆ ಗುತ್ತು ಇವರು ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ದರಿಬಾಗಿಲಿನಲ್ಲಿ ಕಾರ್ಯಲಯವನ್ನು ಬಿ ಜೆ ಪಿ ಯ ಹಿರಿಯ ಮುಖಂಡರಾದ ಪದ್ಮನಾಭ ರಾವ್ ದರಿಬಾಗಿಲು ಹಾಗೂ ಸುಬ್ರಹ್ಮಣ್ಯ ರಾವ್ ನೆತ್ತರಕೆರೆ ಇವರು ಉದ್ಘಾಟಿಸಿದರು. ರಾಮ್‌ದಾಸ್ ಬಂಟ್ವಾಳ್ ಹಿಂದೂ ಸಂಗಮದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಬಂಟ್ವಾಳ ತಾಲೂಕು ಸಂಘ ಚಾಲಕ ಡಾ ಬಾಲಕೃಷ್ಣ , ವಿಭಾಗ ಶಾರೀರಿಕ್ ಪ್ರಮುಖ ವಿನೋದ್ ಕುಮಾರ್ ಕೊಡ್ಮಾನ್, ಬಂಟ್ವಾಳ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ಉಪಾಧ್ಯಕ್ಷ ಅನಿಲ್ ಪಂಡಿತ್, ತಾ ಪಂ ಮಾಜಿ ಉಪಾಧ್ಯಕ್ಷ ಪುರುಷ ಸಾಲಿಯಾನ್ ನೆತ್ತರಕೆರೆ, ಕಳ್ಳಿಗೆ
ಗ್ರಾ ಪಂ ಸದಸ್ಯ ಪುರುಷೋತ್ತಮ ಕೊಟ್ಟಾರಿ,ಸಾಮಾಜಿಕ ಕಾರ್ಯಕರ್ತ ಜಗದೀಶ್ ಹೊಳ್ಳರಬೈಲು, ಪ್ರಮುಖರಾದ ಸುರೇಶ್ ಭಂಡಾರಿ ಅರ್ಬಿ,ಮನೋಹರ್ ಕಂಜತ್ತೂರು,ಕಿಶೋರ್ ಕುಮಾರ್ ನಿಸರ್ಗ, ಸಂತೋಷ್ ಕುಮಾರ್ ನೆತ್ತರಕೆರೆ, ಮನೋಜ್ ವಳವೂರು, ಉಮೇಶ್ ಬೆದ್ರಾಡಿ, ಸತೀಶ್ ಬ್ರಹ್ಮರಕೂಟ್ಲು, ಪ್ರದೀಪ್ ಬ್ರಹ್ಮರಕೂಟ್ಲು, ಮಾಧವ ಬ್ರಹ್ಮರಕೂಟ್ಲು, ಅಜಿತ್ ವಳವೂರು, ಪ್ರಸಾದ್ ವಳವೂರು, ಶ್ರೀಕಾಂತ್ ದರಿಬಾಗಿಲು, ಸಮ್ಮಿತ್ ದರಿಬಾಗಿಲು, ದಯಾನಂದ ಜಾರಂದಗುಡ್ಡೆ, ಯೋಗೀಶ್ ಕೊಡ್ಮಣ್, ಕಿಶೋರ್ ಜಾರಂದಗುಡ್ಡೆ, ಯತೀಶ್ ಜಾರಂದಗುಡ್ಡೆ,ಸಂದೀಪ್ ಶೆಟ್ಟಿ ಕೊಡ್ಮಣ್, ಗಣೇಶ್ ಜಾರಂದಗುಡ್ಡೆ, ಭರತ್ ಜಾರಂದಗುಡ್ಡೆ, ರೂಪೇಶ್ ಜ್ಯೋತಿಗುಡ್ಡೆ, ಸಂದೇಶ್ ದರಿಬಾಗಿಲು, ಯೋಗೀಶ್ ದರಿಬಾಗಿಲು, ಸುಧೀರ್ ಕೊಡ್ಮಣ್, ವಿಶ್ವನಾಥ್ ಪಕ್ಕಲಪಾದೆ, ನಾಗಭೂಷಣ್ ಮೇರಮಜಲು, ವಿಶ್ವನಾಥ್ ದರಿಬಾಗಿಲು, ಮದ್ವಿನ್ ರಾಜ್ ಪೆರಿಯೋಡಿಬೀಡು ಹಾಗೂ 3 ಗ್ರಾಮದ ಕಾರ್ಯಕರ್ತರು ಉಪಸ್ಥಿತರಿದ್ದು, ಶಶಿಧರ್ ದೇವಂದಬೆಟ್ಟು ಕಾರ್ಯಕ್ರಮ ನಿರೂಪಿಸಿದರು.











