ಬಂಟ್ವಾಳ :ಆರೋಗ್ಯವಂತ ವ್ಯಕ್ತಿಗೆ ಶುದ್ಧ ಗಾಳಿ ನೀರು ಸಮತೋಲಿತ ಆಹಾರ ಮುಖ್ಯ,ಜಗತ್ತಿನ ಪ್ರಾಚೀನ ಕಾಯಿಲೆಯಾದ ಕ್ಷಯ ರೋಗವನ್ನು ಸಮತೋಲಿತ ಆಹಾರ ಸೇವನೆ ಹಾಗೂ ತಂಬಾಕು, ಮದ್ಯ ಸೇವನೆ ಮುಂತಾದ ಕೆಟ್ಟ ಚಟಗಳ ನಿಯಂತ್ರಣದಿಂದ ಸಂಪೂರ್ಣ ಗುಣಪಡಿಸಬಹುದು ಎಂದು ದ ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಚ್. ಆರ್. ತಿಮ್ಮಯ್ಯ ಹೇಳಿದರು.
ಅವರು ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಸಭಾಭವನದಲ್ಲಿ ಏರ್ಯ ಆಳ್ವ ಪೌಂಡೇಶನ್ ಮೊಡಂಕಾಪು ಇವರ ಆಶ್ರಯದಲ್ಲಿ ಕ್ಷಯ ರೋಗಿಗಳಿಗೆ ಆಹಾರ-ಧವಸ ಧಾನ್ಯ ವಿತರಣೆ ಮಾಡಿ ಮಾತನಾಡಿ, ಶ್ರೀಮಂತಿಕೆ ಇದ್ದಾರೆ ಸಾಲದು ಹೃದಯ ಶ್ರೀಮಂತಿಕೆ ಇರಬೇಕು,ಯಾವುದೇ ಪಲಾಪೇಕ್ಷೆ ಇಲ್ಲದೆ ಅಶಕ್ತರ ಸೇವೆ ಮಾಡುತ್ತಿರುವ ಕೃಷ್ಣ ಕುಮಾರ್ ಪೂಂಜ ಹಾಗೂ ಸೇವಾಂಜಲಿಯ ತಂಡವು ಈ ಮೂಲಕ ಭಗವಂತನ ಸೇವೆ ಮಾಡುತ್ತಿದೆ ಎಂದು ಹೇಳಿದರು.
ಅತಿಥಿ ನಿವೃತ್ತ ಅಬಕಾರಿ ಅಧಿಕಾರಿ ಎಂ. ಆರ್. ನಾಯರ್ ರಾಮಲ್ ಕಟ್ಟೆ ಮಾತನಾಡಿ, ಸೇವಾಂಜಲಿಯಲ್ಲಿ ನಡೆಯುತ್ತಿರುವ ಸಮಾಜಮುಖಿ ಸೇವೆಯು ಮಾದರಿಯಾಗಿದ್ದು ತನ್ನಿಂದಾಗುವ ನೆರವು ಮುಂದೆಯೂ ಸಂಸ್ಥೆಗೆ ನೀಡುತ್ತೇನೆ ಎಂದು ಹೇಳಿ ಶುಭ ಹಾರೈಸಿದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಪ್ರಾಸ್ತವಿಕವಾಗಿ ಮಾತನಾಡಿ, 40ನೇ ತಿಂಗಳಿನ ಈ ಕಿಟ್ ವಿತರಣಾ
ಕಾರ್ಯಕ್ರಮದಲ್ಲಿ ತಾಲೂಕಿನ ಸುಮಾರು 40 ಜನ ಕ್ಷಯ ರೋಗಿಗಳು ಇಂದು ಸೌಲಭ್ಯ ಪಡೆಯುತ್ತಿದ್ದು, ಇಲ್ಲಿಯವರೆಗೆ ಸುಮಾರು 210 ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರವನ್ನು ವಿತರಿಸಲಾಗಿದ್ದು ಇದಕ್ಕಾಗಿ ರೂ 13ಲಕ್ಷ ವ್ಯಯಿಸಲಾಗಿದೆ, ಏರ್ಯ ಲಕ್ಷ್ಮೀನಾರಾಯಣ ಆಳ್ವರ ಶತಮಾನೋತ್ಸವದ ಪ್ರಯುಕ್ತ ಏರ್ಯ ಆಳ್ವ ಪೌಂಡೇಶನ್ ಮೊಡಂಕಾಪು ಇವರ ಆಶ್ರಯದಲ್ಲಿ ಇಂದಿನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅರೋಗ್ಯ ಇಲಾಖೆಯ ಡಾ ಡೇವಿಡ್ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು, ವೇದಿಕೆಯಲ್ಲಿ ಆರೋಗ್ಯ ಇಲಾಖೆಯ ಕೃಷ್ಣಮೂರ್ತಿ, ಸೇವಾಂಜಲಿಯ ಟ್ರಸ್ಟಿ ಪ್ರಕಾಶ್ ಕಿದೆಬೆಟ್ಟು, , ಸೇವಾಂಜಲಿಯ ಆರೋಗ್ಯ ಕೇಂದ್ರದ ಡಾ.ರೀಮಾ ಉಪಸ್ಥಿತರಿದ್ದರು.
ಪ್ರಮುಖರಾದ ಪದ್ಮನಾಭ ಶೆಟ್ಟಿ ಪುಂಚಮೆ, ದಿನೇಶ್ ಪ್ರಗತಿ, ಪ್ರಶಾಂತ್ ತುಂಬೆ, ನಾರಾಯಣ ಬಡ್ಡೂರು, ಪದ್ಮನಾಭ ಕಿದೆಬೆಟ್ಟು, ವಿಕ್ರಂ ಬರ್ಕೆ, ಮೋಹನ್ ಬೆಂಜನಪದವು,ಪ್ರಕಾಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾನ್ ಕಾರ್ಯಕ್ರಮ ನಿರೂಪಿಸಿದರು.










