ಜಕ್ರಿಬೆಟ್ಟು: "ನಮ್ಮ ಕ್ಲಿನಿಕ್" ಸೇವೆಗೆ ಚಾಲನೆ ನೀಡಿದ ಶಾಸಕ ರಾಜೇಶ್ ನಾಯ್ಕ್.

Coastal Bulletin
ಜಕ್ರಿಬೆಟ್ಟು: "ನಮ್ಮ ಕ್ಲಿನಿಕ್" ಸೇವೆಗೆ ಚಾಲನೆ ನೀಡಿದ ಶಾಸಕ ರಾಜೇಶ್ ನಾಯ್ಕ್.

ಬಂಟ್ವಾಳ :ಕೇಂದ್ರ ಸರಕಾರದ15ನೇ ಹಣಕಾಸಿನ ಪಿಎಂ ಹೆಚ್ ಐ ಎಂ ಯೋಜನೆಯಡಿ ಮಂಜೂರುಗೊಂಡ "ನಮ್ಮ ಕ್ಲಿನಿಕ್ " ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿ ‌ಖಾಸಗಿ ಕಟ್ಟಡವೊಂದರಲ್ಲಿ ಆರಂಭಗೊಂಡಿತ್ತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು "ನಮ್ಮ ಕ್ಲಿನಿಕ್ " ಉದ್ಘಾಟಿಸಿ ಮಾತನಾಡಿ ನಗರ ಪ್ರದೇಶದ ಬಡ ಜನರ ಆರೋಗ್ಯ ಸಮಸ್ಯೆಗೆ ಸಂಜೀವಿನಿಯಾಗಿ ಸೇವೆ ನೀಡಲಿದೆ ಎಂದು ಅವರು ತಿಳಿಸಿದರು.

ಪುರಸಭಾ ಸದಸ್ಯರು ಅವರ ವಾರ್ಡ್ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು ಪ್ರಾಥಮಿಕ ಹಂತದಲ್ಲಿ ರೋಗದ ಲಕ್ಷಣಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲು ಕ್ಲಿನಿಕ್ ಮುಖಾಂತರ ನೆರವಾಗಬೇಕು ಎಂದು ತಿಳಿಸಿದರು.40 ವರ್ಷದ ದಾಟಿದ ಪ್ರತಿಯೊಬ್ಬರೂ ಕೂಡ ಎರಡು ತಿಂಗಳಿಗೊಮ್ಮೆ ಆರೋಗ್ಯ

ತಪಾಸಣೆ ಮಾಡಿಕೊಂಡರೆ ಉತ್ತಮ. ಆರೋಗ್ಯದ ರಕ್ಷಣೆಯ ಬಗ್ಗೆ ಉದಾಸೀನ ಮನೋಭಾವ ಬೇಡ ಎಂದರು.

ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಪುರುಷೋತ್ತಮ, ಮೀನಾಕ್ಷಿ ಗೌಡ, ಬಂಟ್ವಾಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪುಷ್ಪಲತಾ, ಮಂಗಳೂರು ಆರ್.ಸಿ.ಎಚ್ ಅಧಿಕಾರಿ ಡಾ| ರಾಜೇಶ್, ಕೈಕಂಬ ಸಂಚಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಅಶ್ವಿನಿ, ತಾಲೂಕು ಆಸ್ಪತ್ರೆಯ ಅಧಿಕಾರಿ ಡಾ.| ಅಶೋಕ್, ನಮ್ಮ ಕ್ಲಿನಿಕ್ ನ ವೈದ್ಯಾಧಿಕಾರಿ ಆಯಿಶತ್, ಕ್ಲಿನಿಕ್ ಕಟ್ಟಡದ ಮಾಲಕ ಜನಾರ್ದನ ಮತ್ತಿತರರು ಉಪಸ್ಥಿತರಿದ್ದರು.

Leave a Comment