ಬಂಟ್ವಾಳ :ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ತುಂಬೆ ಇದರ ಆಶ್ರಯದಲ್ಲಿ, ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ತುಂಬೆ ಇದರ ನೇತೃತ್ವದಲ್ಲಿ ಶ್ರೀ ಶಾರದಾ ಸಭಾ ಭವನದ ವಿಸ್ತ್ರತ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ ಎ. 3ರಂದು ಗುರುವಾರ ಬೆಳಿಗ್ಗೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ. ತುಂಬೆ ಹಾಗೂ ಶ್ರೀ ಶಾರದಾ ರಜತ
ಮಹೋತ್ಸವ ಸಮಿತಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ, ಕಾರ್ಯಾಧ್ಯಕ್ಷರುಗಳು, ಗೌರವ ಸಲಹೆಗಾರರು, ಉಪಾಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.













