Coastal Bulletin

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದ ಅಂಗಳಕ್ಕೆ ದಿ. ವಾಸುದೇವ ರಾವ್ ಅವರ ಮಕ್ಕಳು ಸುಮಾರು ೧೨ ಲಕ್ಷ ರೂಪಾಯಿ ವೆಚ್ಚದ ಮೇಲ್ಛಾವಣಿಯನ್ನು ಒದಗಿಸಿದ್ದು ಇದರ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ದೇವಸ್ಥಾನದಲ್ಲಿ ನಡೆಯಿತು

ದಿ. ವಾಸುದೇವರಾವ್ ಅವರ ಮಗ ಪದ್ಮನಾಭ ರಾವ್ ಅವರು ಮಾತನಾಡಿ ಶ್ರೀ ದೇವರ ಭಕ್ತರಾಗಿ ದೇವಸ್ಥಾನದ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ತಂದೆಯವರ ಸ್ಮರಣಾರ್ಥ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಮೇಲ್ಛಾವಣಿಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ

ದಿ. ವಾಸುದೇವರಾವ್ ಅವರ ಮಕ್ಕಳಾದ ಪದ್ಮನಾಭ ರಾವ್, ಗಣೇಶ್ ರಾವ್ ಹಾಗೂ ಅಳಿಯ ಪದ್ಮನಾಭ ಹೊಳ್ಳ, ಗುತ್ತಿಗೆದಾರ, ಸುರೇಶ್ ಬಿ.ಸಿ.ರೋಡು ಅವರನ್ನು ಶಾಲು ಹಾಕಿ ಗೌರವಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಲೋಕನಾಥ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಐತಪ್ಪ ಆಳ್ವ ವಂದಿಸಿದರು.

Leave a Comment