ಪೊಳಲಿ: ಶ್ರೀ ಕ್ಷೇತ್ರ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಮಯ್ಯರ ಬೀಡು ಮಾಧವ ಮಯ್ಯ ನಿಧನ.

Coastal Bulletin
ಪೊಳಲಿ: ಶ್ರೀ ಕ್ಷೇತ್ರ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಮಯ್ಯರ ಬೀಡು ಮಾಧವ ಮಯ್ಯ ನಿಧನ.

ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭ ಬಲಿ ಉತ್ಸವ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಮಯ್ಯರ ಬೀಡು ಮಾಧವ ಮಯ್ಯ (63) ಅವರು ಆ. 2 ರಂದು ಬುಧವಾರ ಹೃದಯಘಾತದಿಂದ ನಿಧನಹೊಂದಿದರು.

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಬ್ರಹ್ಮ ವಾಹಕರಾಗಿ ಸೇವೆ

ಶ್ರೀ ಕ್ಷೇತ್ರ ಪೊಳಲಿಯ ಉತ್ಸವದಲ್ಲಿ ಸುಮಾರು 33 ವರ್ಷಗಳಿಂದ

ಬ್ರಹ್ಮ ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಕೃಷಿಚಟುವಟಿಕೆಯಲ್ಲಿಯು ಉತ್ಸುಕರಾಗಿದ್ದರು. ಅಲ್ಲದೇ ಸಾವಿರಸೀಮೆಯಲ್ಲಿ ನಡೆಯುವಂತಹ ಪೂಜಾಕೈಂಕರ್ಯದಲ್ಲಿ ಭಾಗವಹಿಸುತ್ತಿದ್ದರು.

Leave a Comment