ಮಂಗಳೂರು: ಹ್ಯೊಗೆಬಜಾರ್ ಫ್ರೆಂಡ್ಸ್ ಕ್ರಿಕೆಟರ್ಸ್ (ರಿ.) ಇದರ ವತಿಯಿಂದ 4ನೇ ಆವೃತ್ತಿಯ ಎಚ್ ಎಫ್ ಸಿ ಪ್ರೀಮಿಯರ್ ಲೀಗ್ ಪಂದ್ಯಾಟವು ಏ.1 ರಂದು ಶನಿವಾರ ಹ್ಯೊಗೆಬಜಾರ್ ಮೈದಾನದಲ್ಲಿ ನಡೆಯಿತು,
ಲೀಗ್ ಮಾದರಿಯ ಈ ಪಂದ್ಯಾಟದಲ್ಲಿ ಎಚ್ ಎಫ್ ಸಿ ತಂಡದ ಸದಸ್ಯರು ಪಾಲ್ಗೊಂಡು ಎಚ್ ಎಫ್ ಸಿ ಇಂಡಿಯನ್ಸ್, ಎಚ್ ಎಫ್ ಸಿ ಯುನಿವರ್ಸಲ್, ಎಚ್ ಎಫ್ ಸಿ ಫೈಟರ್ಸ್, ಎಚ್ ಎಫ್ ಸಿ ತಂಡರ್ಸ್ ಎಂಬ 4 ತಂಡಗಳು ಭಾಗವಹಿಸಿತ್ತು,
ಪಂದ್ಯಾಟದಲ್ಲಿ ಸುಕೇತ್ ರಾಜ್ ಮಾಲೀಕತ್ವದ ಎಚ್ ಎಫ್ ಸಿ
ಫೈಟರ್ಸ್ ವಿನ್ನರ್, ಜಿತಿನ್ ಶೆಟ್ಟಿ ಮಾಲಕತ್ತದ ಎಚ್ ಎಫ್ ಸಿ ತಂಡರ್ಸ್ ರನ್ನರ್ಸ್ ಆಗಿ ಹೊರಹೊಮ್ಮಿತು. ಈ ಸಂದರ್ಭ ಕ್ರಿಕೆಟ್ ಆಟಗಾರ ವಸಂತ ಕೊಂಚಾಡಿ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಪತ್ ಕುಮಾರ್,ವಿನೋದ್ ಫಿಶ್ ನೆಟ್, ಜಿತಿನ್ ಶೆಟ್ಟಿ, ಅನ್ನು ಕಾಂಚನ್, ಯಶವಂತ ನಾಯಕ್, ಗೌತಮ್ ನಾಯಕ್, ಪ್ರಾಣ್ ಮೆಂಡನ್, ಸುಮಿತ್ ರೈ, ಉಪಸ್ಥಿತರಿದ್ದರು.














