ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ, ಫರಂಗಿಪೇಟೆ ಇವರ ಆಶ್ರಯದಲ್ಲಿ ಜ,ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಹಾಗೂ ಎ ಬಿ ಶೆಟ್ಟಿ ಇನ್ಸ್ಟಿಟ್ಯೂಟ್ ಅಪ್ ಡೆಂಟಲ್ ಸಯೆನ್ಸ್ ದೇರಳಕಟ್ಟೆ ಇವರಿಂದ ತಿಂಗಳ ಪ್ರತಿ ಮಂಗಳವಾರ ನಡೆಯುವ 711 ನೇ ಉಚಿತ ಕಣ್ಣು- ದಂತ- ವೈದ್ಯಕೀಯ ಶಿಬಿರವು ಎ.4,11,18, 25 ರಂದು ಸೇವಾಂಜಲಿ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ 9ರಿಂದ ಮದ್ಯಾಹ್ನ 1ರ ವರೆಗೆ ನಡೆಯಲಿದೆ ನಡೆಯಲಿದೆ.
ಈ ಶಿಬಿರದಲ್ಲಿ ರೋಗ ಪತ್ತೆ ಹಚ್ಚಿದಲ್ಲಿ ಆಸ್ಪತ್ರೆಯ ಸೌಲಭ್ಯಗಳನ್ನು ಆಸ್ಪತ್ರೆಯ ಕಾರ್ಡಿನ ಮುಖಾಂತರ ವಿಶೇಷ ರಿಯಾಯಿತಿ ದರದಲ್ಲಿ ಒದಗಿಸುವ ವ್ಯವಸ್ಥೆ ಇದೆ. ಕಣ್ಣಿನ ಶಸ್ತ್ರ
ಚಿಕಿತ್ಸೆ, ಹೆರಿಗೆ, ಸಿಜೇರಿಯನ್ ಹೆರಿಗೆ ಮತ್ತು ಸೀಳು ತುಟಿ ವಿಕಲಾಂಗತೆಗಳನ್ನು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುತ್ತದೆ ಎಂದು ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಪ್ರಕಟಣೆಯಲ್ಲಿ ತಿಳಿಸಿದೆ.














