Coastal Bulletin

ಬಂಟ್ವಾಳ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಜಲಕ್ರಾಂತಿ ಮೂಲಕ ರೈತರ ಆದಾಯ ದುಪ್ಪಟ್ಟುಗೊಳಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟಿನಲ್ಲಿ 'ಪಶ್ಚಿಮವಾಹಿನಿ' ಯೋಜನೆ ಮೂಲಕ ಮೀಸಲಿಟ್ಟ ರೂ 3,800 ಕೋಟಿ ಮೊತ್ತದ ಅನುದಾನದಲ್ಲಿ ಜಿಲ್ಲೆಯಾದ್ಯಂತ ಕಿಂಡಿ ಅಣೆಕಟ್ಟೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಇಲ್ಲಿನ ಗ್ರಾಮೀಣ ಕೃಷಿಕರಿಗಾಗಿ ಒಟ್ಟು 16 ಕಿಂಡಿ ಅಣೆಕಟ್ಟೆ ಮತ್ತು ಕಿರು ಸೇತುವೆ ನಿರ್ಮಾಣ ಕಾಮಗಾರಿಯು ರೂ 38.88 ಕೋಟಿ ವೆಚ್ಚದಲ್ಲಿ ಮುಂಬರುವ ಮೇ ತಿಂಗಳು ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ

ಇಲ್ಲಿನ ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಸಡ್ಕ ಎಂಬಲ್ಲಿ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕು ಸಂಪರ್ಕಿಸುವ ರೂ 5.40 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ರೂ 135ಕೋಟಿ ವೆಚ್ಚದಲ್ಲಿ ಜಕ್ರಿಬೆಟ್ಟು-ನರಿಕೊಂಬು ನಡುವಿನ ಕಿಂಡಿ ಅಣೆಕಟ್ಟೆ ಮತ್ತು ಸೇತುವೆ ನಿರ್ಮಾಣಕ್ಕೆ ಶೀಘ್ರವೇ ಶಿಲಾನ್ಯಾಸ ನಡೆಯಲಿದೆ ಎಂದರು.

ಇದೇ ವೇಳೆ ರೂ 1.35 ಕೋಟಿ ವೆಚ್ಚದಲ್ಲಿ ಬಡಗಬೆಳ್ಳೂರು ಗ್ರಾಮದ ಕಿರಾಳೆ, ಕುರಿಯಾಳ ಗ್ರಾಮದ ಪಾಪದಡ್ಕದಲ್ಲಿ ರೂ 1.30 ಕೋಟಿ, ರಾಯಿ ಗ್ರಾಮದ ಮಿಯಾಲು ರೂ 2.30 ಕೋಟಿ, ಮೂಡನಡುಗೋಡು ಗ್ರಾಮದ ನರ್ದರಕಟ್ಟೆ ರೂ 2 ಕೋಟಿ, ಮಣಿನಾಲ್ಕೂರು ಗ್ರಾಮದ ಬಾರೆತ್ತಿಮಾರು ರೂ 2.64 ಕೋಟಿ, ಉಳಿ ಗ್ರಾಮದ ಮಣ್ಕೆದಡಿ ರೂ 3.ಕೊಟಿ ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಅವರು ಮಾತನಾಡಿ, ಗುಜರಾತಿನಲ್ಲಿ ಕ್ಷೀರಕ್ರಾಂತಿ ನಡೆದಂತೆ ಬಂಟ್ವಾಳ ಕ್ಷೇತ್ರದಲ್ಲಿ ಜಲಕ್ರಾಂತಿಯಾಗಲಿದೆ ಎಂದರು.

ಕೆಯುಡಬ್ಲುಎಸ್ ನಿರ್ದೇಶಕಿ ಸುಲೋಚನ ಜಿ.ಕೆ., ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಕಾರ್ಯದರ್ಶಿ ಡೊಂಬಯ ಅರಳ, ಗಣೇಶ

ರೈ ಮಾಣಿ, ರಮಾನಾಥ ರಾಯಿ, ಬಿಜೆಪಿ ಯುವ ಮೋರ್ಚಾ ಮುಖಂಡ ಸುದರ್ಶನ್ ಬಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಕಂಬಳಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಪ್ರಭು, ಎಪಿಎಂಸಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ, ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಪ್ರಕಾಶ್ ಆಳ್ವ, ಉಪಾಧ್ಯಕ್ಷೆ ಮಮತಾ, ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಸುನಿಲ್, ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಪಿಡಿಒ ರವಿ ಪಿ., ರಾಯಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಪಂಜಿಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವ ಪೂಜಾರಿ, ಉಪಾಧ್ಯಕ್ಷೆ ಜಯಶ್ರೀ, ಪಿಡಿಒ ವಿದ್ಯಾಶ್ರೀ, ಕಾವಳಪಡೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಉಳಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಮೈರ, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಪ್ರಮುಖರಾದ ರತ್ನಕುಮಾರ್ ಚೌಟ, ಪ್ರಕಾಶ ಅಂಚನ್, ನಂದರಾಮ ರೈ, ಪುರುಷೋತ್ತಮ ಶೆಟ್ಟಿ, ಎ. ವಿಜಯ ರೈ, ಶ್ಯಾಮಪ್ರಸಾದ್ ಪೂಂಜ, ದಿನೇಶ ಶೆಟ್ಟಿ ದಂಬೆದಾರು, ಚಂದ್ರಶೇಖರ ಶೆಟ್ಟಿ, ನೀರಾವರಿ ಇಲಾಖೆ ಸಹಾಯಕ ಶಿವಪ್ರಸನ್ನ ಇದ್ದರು.

Leave a Comment