ಬಿ.ಸಿ.ರೋಡು : ಡಿ.4ರಂದು ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಪ್ರೆಸ್ ಕ್ಲಬ್ ( ರಿ) ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ.

Coastal Bulletin
ಬಿ.ಸಿ.ರೋಡು : ಡಿ.4ರಂದು ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಪ್ರೆಸ್ ಕ್ಲಬ್ ( ರಿ) ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ.

ಬಂಟ್ವಾಳ : ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು, ಪ್ರೆಸ್ ಕ್ಲಬ್ (ರಿ) ಬಿ.ಸಿ.ರೋಡು ಇದರ ಆಶ್ರಯದಲ್ಲಿ ದ.ಕ.ಸಂಸದರಾದ ನಳಿನ್ ಕುಮಾರ್ ಕಟೀಲು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ವಿಶೇಷ ಅನುದಾನದಲ್ಲಿ ನಿರ್ಮಾಣಗೊಂಡ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಡಿ.4 ರಂದು ಆದಿತ್ಯವಾರ ನಡೆಯಲಿದೆ.

ಈ ಸಮಾರಂಭವು ಬಿ.ಸಿ.ರೋಡಿನ ಪುರಸಭಾ ವಾಣಿಜ್ಯ ಸಂಕೀರ್ಣ ದಲ್ಲಿ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯಿಂದ ಜಿ ವಿ ರಾಕ್ರ್ಸ್ ಡ್ಯಾನ್ ಇವರಿಂದ ನೃತ್ಯ ವೈವಿಧ್ಯ ನಡೆಯಲಿದೆ.ಸಂಜೆ 4‌ ರಿಂದ ಪತ್ರಕರ್ತರು ಮತ್ತು ಹವ್ಯಾಸಿ ಕಲಾವಿದರಿಂದ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ಜರಗಲಿದೆ.ಸಂಜೆ 6.30 ರಿಂದ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ- ಕುಡ್ಲ ಇವರಿಂದ ಪರಿಮಳ ಕಾಲನಿ ಎಂಬ ಹಾಸ್ಯಮಯ ತುಳು ನಾಟಕ ನಡೆಯಲಿದೆ.ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment