ಪುತ್ತೂರು, 27,ನವೆಂಬರ್,ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ,ದ.ಕ.ಜಿಲ್ಲಾ ಜೇನು ವ್ಯವಸಾಯ ಸಹಕಾರಿ ಸಂಘ ನಿಯಮಿತ ಪುತ್ತೂರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದ.ಕ.ಜಿಲ್ಲಾ ಘಟಕ , ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ದ.ಕ.ಜಿಲ್ಲೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ತಾಲೂಕು ಘಟಕ ಸಹಭಾಗಿತ್ವದಲ್ಲಿ ಅಂತಾರಾಜ್ಯ ಮಟ್ಟದ "ಮಧು"ಕವಿಗೋಷ್ಠಿ ಯು ಪುತ್ತೂರಿನ ಜೇನು ಸೊಸೈಟಿಯ ಮಾಧುರಿಸೌಧದ ಸಭಾಂಗಣದಲ್ಲಿ ನವಂಬರ್ 27ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಸಾಹಿತಿಗಳಾದ ಪ್ರೊ. ವಿ ಬಿ ಆರ್ತಿ ಕಜೆ ಅವರು ಉದಯೋನ್ಮುಖ ಆಸಕ್ತ ಯುವ ಸಾಹಿತಿಗಳಿಗೆ ಪ್ರೋತ್ಸಾಹ ಅಗತ್ಯವಿದೆ. ಗಡಿನಾಡು ಪ್ರದೇಶದ ಸಾಹಿತಿಗಳನ್ನು ಹಾಗೂ ದೂರದ ಹಾಸನ,ಕಡಬ, ಮಂಗಳೂರು ಪ್ರದೇಶದಿಂದ ಸುಮಾರು 50 ಸಾಹಿತಿಗಳನ್ನು ಒಗ್ಗೂಡಿಸಿ ನಡೆಸುವಂತಹ ಈ ಮಧುಕವಿ ಗೋಷ್ಠಿ ಬಹಳ ಅಭಿನಂದನನೀಯ ಎಂದು ತಿಳಿಸಿ ತಮ್ಮ ಸ್ವರಚಿತ ಕವನವನ್ನು ವಾಚಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ)ಬೆಂಗಳೂರು ವತಿಯಿಂದ ಜಿಲ್ಲಾಘಟಕ ದ. ಕ ಪ್ರಾಯೋಜಕತ್ವದಲ್ಲಿ ಅಂತರ್ಜಾಲ ಆಧಾರಿತ ಅಂತಾರಾಷ್ಟ್ರೀಯ ಮಟ್ಟದ ಮುಕ್ತಕಗಳ ರಚನೆಯ ಸ್ಪರ್ಧೆ ಯಲ್ಲಿ ವಿಜೇತ,ಹಾಗೂ ಭಾಗವಹಿಸಿದವರ ಮುಕ್ತಕಗಳ ಕೃತಿ "ಮುಕ್ತಕ ಪುಷ್ಪ " ವನ್ನು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ರಾದ ಪುತ್ತೂರು ಉಮೇಶ್ ನಾಯಕ್ ಬಿಡುಗಡೆ ಮಾಡುವುದರ ಮೂಲಕ ಲೋಕಾರ್ಪಣೆ ಮಾಡಿ ಸಾಹಿತ್ಯ ಪರಿಷತ್ತು ಮಾತೃ ಸ್ಥಾನದಲ್ಲಿ ನಿಂತು ತಾಲೂಕಿನಲ್ಲಿರುವ ಎಲ್ಲಾ ಸಾಹಿತ್ಯ ಬಳಗ ಹಾಗೂ ಸಾಹಿತಿಗಳನ್ನು ಬೆಳೆಸುವ ಹಾಗೂ ಅವರಿಗೆ ವೇದಿಕೆ ನೀಡುವಲ್ಲಿ ಕಟಿಬದ್ಧವಾಗಿದೆ. ಸಾಹಿತ್ಯ ಪರಿಷತ್ತು ನಮ್ಮ ಸಂಸ್ಥೆ ಎಂಬ ಮನೋಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದ ಅವರು
ಎಲ್ಲಾ ಸಾಹಿತಿಗಳು ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಂಬೆ ಕಾನ ಸದಾಶಿವ ರೈ ಹಾಗೂ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಜೇನುವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ರಾದ ಶ್ರೀ ಚಂದ್ರಕೋಲ್ಚಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಂಯೋಜಕರಾದ
ಹರಿಪ್ರಸಾದ್ ಎಮ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಘಟನಾ ಕಾರ್ಯದರ್ಶಿ, ಮಕ್ಕಳ ಸಾಹಿತಿ ಶ್ರೀ ಸಮುದ್ರವಳ್ಳಿ ವಾಸು,ಮಧು ಪ್ರಪಂಚ ಪತ್ರಿಕೆಯ ಸಂಪಾದಕರಾದ ಶ್ರೀಜಯಾನಂದ ಪೆರಾಜೆ,
,ಡಾ.ಸುರೇಶ ನೆಗಳಗುಳಿ ಅಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದ. ಕ ಜಿಲ್ಲೆ,ರೇಮಂಡ್ ಡಿಕೂನ ತಾಕೋಡೆ ಪಿಂಗಾರ ಸಾಹಿತ್ಯ ಬಳಗ ಸಂಚಾಲಕರು ,ಹಿರಿಯ ಪತ್ರಕರ್ತರು,ಶಾಂತಾ ಪುತ್ತೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷರು,ಮುಕ್ತಕ ಪುಷ್ಪ ಕೃತಿಯ ಮುಖಪುಟ ವಿನ್ಯಾಸ ಮಾಡಿದ ಸಾಹಿತಿ ಗೋಪಾಲಕೃಷ್ಣ ಶಾಸ್ತ್ರಿ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಹರ್ಷ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಂತಾ ಪುತ್ತೂರು ಅತಿಥಿಗಳನ್ನು ಸ್ವಾಗತಿಸಿದರು ದ.ಕ ಜಿಲ್ಲಾ ಜೇನುವ್ಯವಸಾಯಗಾರರ ಸಹಕಾರಿ ಸಂಘದ ನಿರ್ದೇಶಕ ರಾದ ಶ್ರೀ ಜಿ.ಪಿ.ಶ್ಯಾಮಭಟ್ ಧನ್ಯವಾದವಿತ್ತರು.ಕಾರ್ಯಕ್ರಮ ವನ್ನು ಕುಮಾರಿ ಅಪೂರ್ವ ಕಾರಂತ್ ನಿರೂಪಿಸಿದರು.















