Coastal Bulletin

ಬಂಟ್ವಾಳ: ಗೋಲ್ಡ್ ಪಿಂಚ್ ಸಿಟಿ ಮೈದಾನಕ್ಕೆ ಪಿ.ಎಂ.ಮೋದಿ ಆಗಮನ, ಸಮಾವೇಶ ಸ್ಥಳಕ್ಕೆ ಮೋದಿ ಆಗಮನ, ಎನ್‌ಎಮ್ ಪಿ ಎ ಮಾಡೆಲ್ ಬಗ್ಗೆ ಮೋದಿ ಗೆ ಮಾಹಿತಿ. 3.800 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೆರವೇರಿಸಿದ ಬಳಿಕ ಸಮಾವೇಶ ನಡೆಯುವ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ.

ತುಳುನಾಡಿನ ಮಲ್ಲಿಗೆ ಹೂ ಹಾರ, ಶಾಲು , ಮೈಸೂರು ಪೇಟೆ ತೊಡಿಸಿ,ಪರಶುರಾಮನ ಪ್ರತಿಮೆ ನೀಡಿ ವಿಶೇಷ ಗೌರವ ನೀಡಿ ಸ್ವಾಗತಿಸಿದ ಮಂಗಳೂರಿನ ಜನತೆ.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದ.ಕ.ಜಿಲ್ಲೆಯ ಜನರನ್ನು ಉದ್ದೇಶಿಸಿ ಮಾತನಾಡಿ, ದೇಶ ಅರ್ಥಿಕ ಅಭಿವೃದ್ಧಿಗೆ ಸಮುದ್ರ ಯೋಜನೆಗಳು ಮಹತ್ವ ಪಡೆದಿದೆ.ಕರಾವಳಿಯ ವ್ಯಾಪಾರ ವಹಿವಾಟು ಗಳಿಗೆ ಸಹಾಯಕವಾಗಲಿದೆ. ಬಂದರುಗಳ ಸಂಪರ್ಕವನ್ನು ಮತ್ತಷ್ಟು ಉತ್ತಮಗೊಳಿಸಲು ಸರಕಾರ ಪ್ರಯತ್ನಸುತ್ತಿದೆ. ವಸ್ತುಗಳ ರಪ್ತಿನಲ್ಲಿ ಕರಾವಳಿ ಪ್ರದೇಶದ ಕೊಡುಗೆ ಅನನ್ಯ. ಎಲ್ಲರ ಶಕ್ತಿ ಹೆಚ್ಚಿಸುವ ಯೋಜನೆ ಜಾರಿಗೆ ತಂದಿದ್ದೇವೆ, ಮೇಕ್ ಇನ್ ಇಂಡಿಯಾ ಇನ್ನೂ ವಿಸ್ತರಣೆಗೊಳ್ಳಲಿದೆ. ಭಾರತ್ ಮಹಲ್ ಯೋಜನೆಯಿಂದ ರಸ್ತೆಗಳು ಅಭಿವೃದ್ಧಿಯಾಗುತ್ತಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಗೆ ಕರ್ನಾಟಕ ಹೆಸರು ವಾಸಿ. ಮಂಗಳೂರು ವಿಮಾನ ನಿಲ್ದಾಣ ಮತ್ತಷ್ಟು ದ್ವಿಗುಣಗೊಂಡಿದೆ. ಕಳೆದ ಎಂಟು ವರ್ಷಗಳಲ್ಲಿ ಕರಾವಳಿಯ ತಾಕತ್ತು ದ್ವಿಗುಣ ಗೊಂಡಿದೆ.ಇಂದು ಶಿಲಾನ್ಯಾಸಗೊಂಡ ನಾಲ್ಕು ಯೋಜನೆ ಗಳು ರಾಜ್ಯವನ್ನು ಅಭಿವೃದ್ಧಿ ಯತ್ತ ಕೊಂಡ್ಯೋಯಲಿದೆ. ಆದುನಿಕ ಭಾರತ ನಿರ್ಮಿಸಲು ಆದುನಿಕ ಸೌಲಭ್ಯ ನಿರ್ಮಿಸಿಲಾಗಿದೆ.ಇದರಿಂದ ಹೊಸ ಉದ್ಯೋಗ ಸ್ರಷ್ಟಿಯಾಗಲಿದೆ. ರಾಜ್ಯದಲ್ಲಿ ರೈಲು ವಿದ್ಯುತೀಕರಣ ಸಂಪೂರ್ಣ ಮುಗಿದಿದೆ.2014 ಕ್ಕೆ ಹೋಲಿಸಿದರೆ ರಾಜ್ಯದ ಬಜೆಟ್ ನಾಲ್ಕು ಪಟ್ಟು ಹೆಚ್ಚಿಸಿದೆ.ಕರ್ನಾಟಕದ 2. ಲಕ್ಷ ಬೀದಿ ವ್ಯಾಪರಿಗಳಿಗೆ

ಉದ್ಯಮಕ್ಕೆ ಸಾಲ ನೀಡಲಾಗಿದೆ. 12_ಕೋಟಿ ರೈತರ ಬ್ಯಾಂಕ್ ಖಾತೆಗ ಕನಿಷ್ಟ 2 ಲಕ್ಷ ರೂ. ಲಾಭ ಸಿಕ್ಕಿದೆ ಬಡವರ ಚಿಕಿತ್ಸೆ ಗಾಗಿ ಆಯುಷ್ಮಾನ್ ಭಾರತ ಮೂಲಕ ಉಚಿತವಾಗ ಚಿಕಿತ್ಸೆ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತದ ಲಾಭ ಕರ್ನಾಟಕದ ಮೂರು‌ಲಕ್ಷ ಮನೆಗಳಿಗೆ ತಲುಪಿದೆ. ಒಂದೊಂದು ‌ಕುಟುಂಬಕ್ಕೆ ಕನಿಷ್ಠ ನಾಲ್ಕು ಲಕ್ಷ ರೂ‌ಗಳ ಚಿಕಿತ್ಸಾ ‌ವೆಚ್ಚ ಉಳಿದಿದೆ. ಕರ್ನಾಟಕದ ಮೂರು ಲಕ್ಷ ಬಡ ಜನರ ಮನೆಗಳಿಗೆ ನೀರು ತಲುಪಿಸುವ ಕೆಲಸ ಆಗಿದೆ. ಸಣ್ಣ ಸಣ್ಣ ವ್ಯಾಪಾರಿಗಳು ಸಣ್ಣ ಸಣ್ಣ‌ ವೃತ್ತಿಯವರಿಗೆ ದೇಶದ ಅಭಿವೃದ್ಧಿಯ ಲಾಭ ದೊರೆತಿದೆ ಎಂದು ಅವರು ಹೇಳಿದರು.

ಹರ್ ಘರ್ ತ್ರಿರಂಗಾ ಅಭಿಯಾನವನ್ಶ ಜನತೆ ಅದ್ಬುತ ಯಶಸ್ಸು ನೀಡಿ ರಾಷ್ಟ್ರ ಭಕ್ತಿ ಪ್ರದರ್ಶಿಸಿದ ಜನತೆಯನ್ನು ಶ್ಲಾಘಿಸಿದರು. ಭಾಷಣದ ಕೊನೆಯಲ್ಲಿ ರಾಣಿ ಅಬ್ಬಕ್ಕನನ್ನು ನೆನೆಪಿಸಿದ ಮೋದಿ.

 ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ರಾಜ್ಯಪಾಲ ಗೆಹಲೋತ್, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವೇದವಾಸ ಕಾಮತ್, ಹರೀಶ್ ಪೂಂಜ, ಭರತ್ ಶೆಟ್ಟಿ, ಉಮನಾಥ ಕೋಟ್ಯಾನ್, ಸಂಜೀವ ಮಠಂದೂರು, ಮತ್ತಿತರರು ಉಪಸ್ಥಿತರಿದ್ದರು.

Leave a Comment