ಬಂಟ್ವಾಳ:ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ :ಬಿಜೆಪಿಯ ನಿಯೋಗದಿಂದ ದೂರು

Coastal Bulletin
ಬಂಟ್ವಾಳ:ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ :ಬಿಜೆಪಿಯ ನಿಯೋಗದಿಂದ ದೂರು

ಬಂಟ್ವಾಳ: ಬಿಜೆಪಿ ಕಾರ್ಯಕರ್ತರ ನಡುವೆ ಬಂಟ್ವಾಳದ ಸಭೆಯಲ್ಲಿ ಹೊಡೆದಾಟ ನಡೆದಿದೆ ಎಂದು ತುಮಕೂರು ಪಾವಗಡದ ಘಟನೆಯ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ದುರುದ್ದೇಶದೊಂದಿಗೆ ಪ್ರಸಾರ ಮಾಡಿದ ಬಗ್ಗೆ ಬಂಟ್ವಾಳ ಬಿಜೆಪಿಯ ನಿಯೋಗ ಮಾ.1ರಂದು ಸೋಮವಾರ ಉಪ ಚುನಾವಣಾಧಿಕಾರಿ ಹಾಗೂ ಬಂಟ್ವಾಳ ನಗರ ಠಾಣಾಧಿಕಾರಿಗಳಿಗೆ ಮಾದರಿ ನೀತಿಸಂಹಿತೆಯ ಉಲ್ಲಂಘನೆಯ ಬಗ್ಗೆ ದೂರು ನೀಡಿದೆ.

ಈ ಸಂದರ್ಭದಲ್ಲಿ ಬಿಜೆಪಿ ನಿಯೋಗದ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಪ್ರಮುಖರಾದ ರಾಮದಾಸ ಬಂಟ್ವಾಳ್,ಗೋವಿಂದ

ಪ್ರಭು, ದೇವಪ್ಪ ಪೂಜಾರಿ,ರವೀಶ್ ಶೆಟ್ಟಿ , ಡೊಂಬಯ ಅರಳ, ಮೋನಪ್ಪ ದೇವಸ್ಯ, ದಿನೇಶ್ ಶೆಟ್ಟಿ ದಂಬೆದಾರ್ ಉಪಸ್ಥಿತರಿದ್ದರು.

Leave a Comment