Coastal Bulletin

ರೋಟರಿ ಕ್ಲಬ್ ತೀರ್ಥಹಳ್ಳಿ ಹಾಗೂ ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನಪದವು ಇವರ ಸಹಯೋಗದಲ್ಲಿ ಅಂಗಾಂಗ ದಾನ, ದೇಹದಾನದ ಬಗ್ಗೆ ಜನ ಜಾಗೃತಿ ಹಾಗೂ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ 50 ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಮ್ಯಾರಥಾನ್ ನ ನಡೆದು ನಂತರ ಸಾರ್ವಜನಿಕರಿಗೆ ಅಂಗಾಂಗ ಹಾಗೂ ದೇಹದಾನದ ಕುರಿತು ಜಾಗೃತಿ ಮೂಡಿಸುವ ಕರ ಪತ್ರ ಹಂಚಲಾಯಿತು,ನಂತರ ಡಾ.ಗಣೇಶ್ ಭಟ್ ಐ.ಎಂ.ಎ ತೀರ್ಥಹಳ್ಳಿ ಘಟಕ ಇವರು ಅಂಗಾಂಗ ಹಾಗೂ ದೇಹದಾನದ ಕುರಿತು ಪ್ರಾಜೆಕ್ಟರ್ ಮೂಲಕ ಪಿ.ಪಿ.ಟಿ ಕಿಟ್ ಬಳಸಿ

ಸವಿವರವಾಗಿ ತಿಳಿಸಿದ್ದಲ್ಲದೇ ಹಲವರ ಸಮಸ್ಯೆ,ಸಂಶಯ,ಪ್ರಶ್ನೆಗೆ ಸಮಂಜಸವಾದ ಉತ್ತರ ನೀಡಿದರು.

ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ ಮನೋಜ್ ಕಾರ್ಯಕ್ರಮದ ಮೇಲುಸ್ತುವಾರಿ ಮಾಡಿದರು.ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನಪದವು ಪ್ರಾಧ್ಯಾಪಕರಾದ ನಾರಾಯಣ ಸ್ವಾಮಿ,ರೊ.ಡಾ.ನಂದಕಿಶೋರ್ ಯು.ಕೆ, ರೊ.ವಾಣಿ ಗಣೇಶ್ , ಇನ್ನರ್ ವೀಲ್ ಅಧ್ಯಕ್ಷರಾದ ಶಕುಂತಲಾ, ಪಟ್ಟಣ ಪಂಚಾಯತ್ ತೀರ್ಥಹಳ್ಳಿ ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ದತ್ತಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Comment