Coastal Bulletin

ಬಂಟ್ವಾಳ :ಬಿಸಿರೋಡ್ ಪದ್ಮ ಕಾಂಪ್ಲೆಕ್ಸ್ ಬಳಿ ಇರುವ ಎ ಟಿ ಎಂ ಒಂದರಲ್ಲಿ ರೂ 9000 ಡ್ರಾ ಮಾಡಲು ಹೋಗಿ ಹಣ ಬರದೆ ಬರಿ ಕೈಯಲ್ಲಿ ವಾಪಸಗಿದ್ದ ಗ್ರಾಹಕರಿಗೆ ಬಂಟ್ವಾಳ ನಗರ ಠಾಣೆಯಲ್ಲಿ ಹಣ ಹಿಂತುರುಗಿಸಿದ ಘಟನೆ ಫೆ27ರಂದು ನಡೆದಿದೆ.

ನರಿಕೊಂಬು ನಿವಾಸಿ ಮುಕ್ತ ಪೈ ಆವರು ಎ ಟಿ ಎಂ ಗೆ ಕಾರ್ಡ್ ಹಾಕಿ ಹಣ ಬರದೆ ವಾಪಸಗಿದ್ದರು, ನಂತರ ಅದೇ ಎ ಟಿ ಎಂ ಗೆ ಬಂದ ಬಿ ಸಿ ರೋಡ್ ತಾಲೂಕು ಕಚೇರಿ ಸಿಬ್ಬಂದಿ ಸೀತಾರಾಮ ಪೂಜಾರಿ ಕಮ್ಮಾಜೆ ಹಣ ತೆಗೆಯಲು ಕಾರ್ಡ ಹಾಕುವಾಗ ಮಷೀನ್ ನಲ್ಲಿ 9000 ರೂಪಾಯಿ ಕಂಡು

ಬಂತು, ಇವರು ಇದನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದರು , ನಂತರ ಠಾಣಾಧಿಕಾರಿ ಹಾಗೂ ಅವರ ಅಧಿನದ ಸಿಬ್ಬಂದಿ ಸಂಬಂಧಪಟ್ಟ ಬ್ಯಾಂಕ್ ಗೆ ವಿಚಾರಿಸಿ ಅ ಗ್ರಾಹಕರನ್ನು ಠಾಣೆಗೆ ಕರೆಸಿ ಹಣವನ್ನು ಹಿಂತಿರುಗಿಸಿದ್ದಾರೆ. ಬಂಟ್ವಾಳ ನಗರ ಠಾಣೆಯ ಸಮಯೋಚಿತ ಸಹಕಾರ ಹಾಗೂ ಸೀತಾರಾಮ ಪೂಜಾರಿ ಕಮ್ಮಾಜೆ ಯವರ ಪ್ರಾಮಾಣಿಕತೆ ವ್ಯಾಪಕ ಪ್ರಶಂಸೆಗೆ ಪಾತ್ರ ವಾಗಿದೆ.

Leave a Comment