Coastal Bulletin

ಬಂಟ್ವಾಳ: ಪೋಷಕರ ಸಹಕಾರ ಇದ್ದಾಗ ಸರಕಾರಿ ಶಾಲೆಗಳು ಪ್ರಗತಿ ಹೊಂದಲು ಸಾಧ್ಯವಿದೆ. ಶಾಲೆಯ ಪ್ರತೀ ಆಗು- ಹೋಗುಗಳ ಬಗ್ಗೆ ಪೋಷಕರು ಗಮನ ಹರಿಸಿದಾಗ ಸರಕಾರಿ ಶಾಲೆಗಳು ಉತ್ತಮ ಫಲಿತಾಂಶದೊಂದಿಗೆ ಪ್ರಗತಿಯ ಪಥದಲ್ಲಿ ಸಾಗಲು ಸಾಧ್ಯವಿದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ ಇದರ ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಜಯಪ್ರಕಾಶ್ ಪೆರ್ವ ಹೇಳಿದರು.ಬುಧವಾರ ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲೆಯ ಹಿರಿಯ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ಮಾತನಾಡಿ ಶಾಲೆಯ ಪ್ರಗತಿಯಲ್ಲಿ ಸಮುದಾಯದ ಪಾತ್ರ ಮಹತ್ತರವಾದುದು, ಸಮುದಾಯ ತಮ್ಮ ಜವಾಬ್ದಾರಿಯನ್ನು ಅರಿತು ಮುಂದುವರಿದಾಗ ಶಾಲೆಯು ಸರ್ವಾಂಗೀಣ ಪ್ರಗತಿ ಸಾಧಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ದೊರೆಯಲು ಸಾಧ್ಯ ಎಂದು ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿ ಸದಸ್ಯ ದಿನಕರ್ ಮಾತನಾಡಿ ಶಾಲೆ ಹಾಗೂ ಪೋಷಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸಿದರು.

ಸದಸ್ಯ ರವಿಪಂಬಂಧ ಉಪಸ್ಥಿತರಿದ್ದರು.

ಶಾಲಾ ಉಪಪ್ರಾಂಶುಪಾಲೆ ಜಯಲಕ್ಷ್ಮೀ ಪಿ.ಎನ್ ಪ್ರಾಸ್ತವಿಕವಾಗಿ ಮಾತನಾಡಿ ಸಮುದಾಯದತ್ತ ಶಾಲೆಯ ಉದ್ದೇಶವನ್ನು ತಿಳಿಸಿದರು. ಶಿಕ್ಷಕ ವೆಂಕಟರಮಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಆಲಿಸ್ ಪಾಯಿಸ್ ಸ್ವಾಗತಿಸಿದರು, ಸಹಶಿಕ್ಷಕ ಗಣೇಶ್ ಬಿ. ವಂದಿಸಿದರು. ಗೌರವ ಶಿಕ್ಷಕಿಯರಾದ ಹೇಮಾವತಿ ಹಾಗೂ ರಕ್ಷಿತಾ ವಿಜೇತರ ಬಹುಮಾನ ಪಟ್ಟಿ ವಾಚಿಸಿದರು. ಸಹಶಿಕ್ಷಕರಾದ ಸುಲೋಚನ ಕುಮಾರಿ, ಶರ್ಮಿಳಾ ಶೆಣೈ, ಬಾಲಕೃಷ್ಣ ಶೆಟ್ಟಿ ಸಹಕರಿಸಿದರು. ಬಳಿಕ ವಿದ್ಯರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು

Leave a Comment