ಬಂಟ್ವಾಳ :ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಬ್ರಹ್ಮಗಿರಿ, ಗೋವಿನತೋಟ ಪುದು, ಬಂಟ್ವಾಳ ಮತ್ತು ಗೋ ಸೇವಾ ಗತಿವಿಧಿ, ಕರ್ನಾಟಕbಇದರ ಸಂಯುಕ್ತ ಆಶ್ರಯದಲ್ಲಿ ಗೋ ನವರಾತ್ರಿ ಉತ್ಸವವು 2024 ನವೆಂಬರ್ 2 ಶನಿವಾರದಿಂದ ನವೆಂಬರ್ 10 ಆದಿತ್ಯವಾರದ ವರೆಗೆ ಸಂಜೆ ಗಂಟೆ 5-30ರಿಂದ 8-00ರ ವರೆಗೆ ರಾಧಾಸುರಭಿ ಗೋ ಮಂದಿರ, ಗೋವಿನತೋಟದಲ್ಲಿ ನಡೆಯಲಿದೆ.
ಪ್ರತೀದಿನ ಸಂಜೆ ಗಂಟೆ 5-30ರಿಂದ ಭಜನಾ ಸಂಕೀರ್ತನೆ 6-30ರಿಂದ ಸಾಮೂಹಿಕ ಗೋ ಪೂಜೆ 6-45ರಿಂದ ಪೂಜ್ಯ ಭಕ್ತಿ ಭೂಷಣ್‌ದಾಸ್ ಪ್ರಭೂಜಿಯವರಿಂದ ಕಥಾ ಪ್ರವಚನ - ಶ್ರೀ ರಾಮಚರಿತ ಮಾನಸ, 7-45ರಿಂದ
ಮಹಾ ಮಂಗಳಾರತಿ, ಪ್ರಸಾದ ಭೋಜನ ಪ್ರತೀದಿನ ಬೆಳಿಗ್ಗೆ ಗಂಟೆ 10-00ರಿಂದ ಮಧ್ಯಾಹ್ನ ಗಂಟೆ 1-00ರ ವರೆಗೆ ಗೋ ಉತ್ಪನ್ನ ಪ್ರಶಿಕ್ಷಣ ವರ್ಗ -ಮಾಹಿತಿ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.















