ನೆತ್ತರಕೆರೆ : ನ. 3ರಂದು ಶ್ರೀ ಕ್ಷೇತ್ರ ಪೊಳಲಿಗೆ ಬೃಹತ್ ಪಾದಯಾತ್ರೆ ಹಾಗೂ ಚಂಡಿಕಾಹೋಮ.

Coastal Bulletin
ನೆತ್ತರಕೆರೆ : ನ. 3ರಂದು ಶ್ರೀ ಕ್ಷೇತ್ರ ಪೊಳಲಿಗೆ ಬೃಹತ್ ಪಾದಯಾತ್ರೆ ಹಾಗೂ ಚಂಡಿಕಾಹೋಮ.

ಬಂಟ್ವಾಳ :ಗ್ರಾಮ ವಿಕಾಸ ಪ್ರತಿಷ್ಠಾನ ಹಾಗೂ ಶ್ರೀ ಶನೈಶ್ಚರ ಪೂಜಾ ಸೇವಾ ಸಮಿತಿ, ನೆತ್ತರಕೆರೆ ಇದರ ಅಶ್ರಯದಲ್ಲಿ ಸಂಸ್ಕಾರಯುಕ್ತ, ಸಾಮರಸ್ಯಯುಕ್ತ, ಸ್ವಾಸ್ಥ್ಯಯುಕ್ತ ರಾಷ್ಟ್ರಭಾವಯುಕ್ತ ಸಮಾಜದ ನಿರ್ಮಾಣಕ್ಕಾಗಿ ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಾನಕ್ಕೆ ಪಾದಯಾತ್ರೆ ಹಾಗೂ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮವು ನ.03ನೇ ಆದಿತ್ಯವಾರ ನಡೆಯಲಿದೆ.

ಅಂದು ಬೆಳಿಗ್ಗೆ 5-00 ಗಂಟೆಗೆ ನೆತ್ತರಕೆರೆ ಅಶ್ವಥಕಟ್ಟೆಯಲ್ಲಿ ಪ್ರಾರ್ಥನೆಯೊಂದಿಗೆ ಪಾದಯಾತ್ರೆ ಸೇವೆ ಪ್ರಾರಂಭವಾಗಿ 8-30ಕ್ಕೆ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಚಂಡಿಕಾಹೋಮ

ಪ್ರಾರಂಭ, 11-30 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಭಗವದ್ಭಕ್ತರೆಲ್ಲರೂ ಶೃದ್ಧಾಭಕ್ತಿಯಿಂದ ದೇವತಾಕಾರ್ಯದಲ್ಲಿ ಭಾಗವಹಿಸಬೇಕೆಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment