Coastal Bulletin

ಬಂಟ್ವಾಳ :ಇಲ್ಲಿನ ಪುದು ಗ್ರಾಮದ ಗೋವಿನತೋಟ ಎಂಬಲ್ಲಿ ಶ್ರೀ ರಾಧಸುರಭಿ ಗೋಮಂದಿರದಲ್ಲಿ ಭಗವಾನ್ ಗೋಪಾಲನ ಮತ್ತು ಗೋಮಾತೆಯ ಮಡಿಲಲ್ಲಿ ಕನ್ಯಾ ಪೂಜನ ಕಾರ್ಯಕ್ರಮ ಹಾಗೂ ನವರಾತ್ರಿ ಮಹತ್ವದ ಬಗ್ಗೆ ಪ್ರವಚನ ಅ.5ರಂದು ನಡೆಯಲಿದೆ.

ಬೆಳಿಗ್ಗೆ 9ಗಂಟೆಯಿಂದ ನಡೆಯುವ ಕನ್ಯಾ ಪೂಜನ ಕಾರ್ಯಕ್ರಮದಲ್ಲಿ ವಿಜಯದಶಮಿಯ ಅ ದಿನದಲ್ಲಿ 9ಬಾಲ ಕನ್ನಿಕೆಯರಿಗೆ ಆರತಿ ಬೆಳಗಿಸಿ ಪಾದ ಪೂಜೆ ಮಾಡಲಾಗುವುದು.ಈ ಸಂದರ್ಭದಲ್ಲಿ ನವರಾತ್ರಿಯ ಮಹತ್ವದ

ಬಗ್ಗೆ ಪ್ರವಚನ ಹಾಗೂ ಗೋ ಪೂಜೆ ನಡೆಯಲಿದೆ.

ಮದ್ಯಾಹ್ನ ದೇವರ ಆರತಿಯ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ರಾಧಾ ಸುರಭಿ ಗೋಶಾಲೆಯ ಅಧ್ಯಕ್ಷರಾದ ಭಕ್ತಿ ಭೂಷಣ್ ದಾಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment