ಇಂದಿನಿಂದ ಭಾರತದಲ್ಲಿ 5 g ಸೇವೆ ಶುರುವಾಗಲಿದೆ. ಪ್ರಧಾನಿ ಮೋದಿ ಬೆಳಿಗ್ಗೆ 10 ಗಂಟೆಗೆ 5 g ದೂರ ಸಂಪರ್ಕ ಸೇವೆಗೆ ಚಾಲನೆ ನೀಡಲಿದ್ದಾರೆ. ಆರನೇ ಇಂಡಿಯನ್ ಮೊಬೈಲ್ ಕಾಂಗ್ರೆಸ್ ನಲ್ಲಿ ದೇಶದ ಆಯ್ದ ನಗರಗಳಲ್ಲಿ ಈ ಸೇವೆಗೆ ಚಾಲನೆ ನೀಡಲಿದ್ದು, ಎರಡು ವರ್ಷಗಳಲ್ಲಿ ದೇಶದಾದ್ಯಂತ ಹೈಸ್ಪೀಡ್ ಸೇವೆ ಹಂತ ಹಂತವಾಗಿ ಲಭ್ಯವಾಗಲಿದೆ.
ಮುಕೇಶ್ ಅಂಬಾನಿಯವರ ಜಿಯೋ, ಸುನೀಲ್ ಭಾರ್ತಿ ಮಿತ್ತಲ್ ರವರ ಭಾರ್ತಿ ಏರ್ ಟೆಲ್ ಮತ್ತು ವೋಡಾಪೋನ್ ,ಐಡಿಯಾ ಕಂಪೆನಿಗಳು 5 ಜಿ ಸೇವೆ ಆರಂಭಿಸಲು ಅಗತ್ಯವಿರುವ ತರಂಗಾಂತರಗಳನ್ನು ಹರಾಜಿನ ಮೂಲಕ ಖರೀದಿಸಿವೆ. ಭಾರತದಲ್ಲಿ 5 ಜಿ ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸಲು ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್ ಗಳು ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡಿಲಿವೆ.
ಈ ಸೇವೆ ಶುರುವಾದ ನಂತರ ಹೊಸ ಆರ್ಥಿಕ ಅವಕಾಶಗಳು ತೆರೆದುಕೊಳ್ಳುವ
ನಿರೀಕ್ಷೆ ಇದೆ. ಇದರಿಂದ ಸಾಮಾಜಿಕ ಪ್ರಯೋಜನ ಕೂಡ ಆಗಲಿದೆ. ಈ ಸೇವೆ 2035 ರ ವೇಳೆಗೆ 450 ಶತಕೋಟಿ ಡಾಲರ್ ತಲುಪುವ ನಿರೀಕ್ಷೆ ಇದೆ. 4gಯ 100Mbps ಸಾಮರ್ಥ್ಯಕ್ಕೆ ಹೊಲಿಸಿದರೆ 5g ವೇಗವು 10Gbps ರವರೆಗೆ ಹೋಗಲಿದೆ.
5g ವೇಗದಲ್ಲಿ ಉತ್ತಮ ಗುಣಮಟ್ಟದ ವೀಡಿಯೋ ಕರೆ ಸೇವೆಗಳನ್ನು ಒದಗಿಸುತ್ತದೆ. ಒಟ್ಟಾರೆಯಾಗಿ ವೇಗವಾಗಿ ಸಾಗುತ್ತಿರುವ 4 g ಜಮಾನದಲ್ಲಿ ಇಂದಿನಿಂದ ಮತ್ತಷ್ಟು ವೇಗವಾಗಿ ಸಾಗಲು 5 g ಸಹಕಾರಿಯಾಗಲಿದೆ.













